HomeLatest NewsBREAKING : ಭಾರತೀಯ ವಾಯುಪಡೆಗೆ ಆನೆ ಬಲ : 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ...

BREAKING : ಭಾರತೀಯ ವಾಯುಪಡೆಗೆ ಆನೆ ಬಲ : 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್.!

ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಡಲಾಗಿದೆ. ಭಾರತೀಯ ವಾಯುಪಡೆಯ (IAF) ಬತ್ತಳಿಕೆಗೆ ರಫೇಲ್ ಜೆಟ್ಗಳ ಸಂಖ್ಯೆ ಹೆಚ್ಚಾಗಲಿದೆ. ಹೌದು. ಬಹುಕಾಲದ ನಿರೀಕ್ಷೆಯಂತೆ, ಫ್ರಾನ್ಸ್ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬೃಹತ್ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ (DAC) ಅನುಮೋದನೆ ನೀಡಿದೆ. ಇದರೊಂದಿಗೆ ಅಮೆರಿಕದ P-8I ಕಣ್ಗಾವಲು ವಿಮಾನಗಳ ಖರೀದಿಗೂ ಹಸಿರು ನಿಶಾನೆ ಸಿಕ್ಕಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಗೆ ಮುನ್ನವೇ ಈ ಘೋಷಣೆ ಹೊರಬಿದ್ದಿರುವುದು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.ಸುಮಾರು ₹3.25 ಲಕ್ಷ ಕೋಟಿ, ಇದು ಭಾರತದ ಈವರೆಗಿನ ಅತಿದೊಡ್ಡ ರಕ್ಷಣಾ ಒಪ್ಪಂದವಾಗಿದೆ.

• ವಾಯುಪಡೆಗೆ ಬಲ: ಪ್ರಸ್ತುತ ವಾಯುಪಡೆಯಲ್ಲಿ 29 ಸ್ಕ್ವಾಡ್ರನ್ಗಳಿದ್ದು, 42 ಸ್ಕ್ವಾಡ್ರನ್ಗಳ ಅವಶ್ಯಕತೆಯಿದೆ. ಈ ಡೀಲ್ ಮೂಲಕ ಆ ಕೊರತೆ ನೀಗಲಿದೆ.
• ನೌಕಾಪಡೆಗೆ ಬಲ: 114 ರಫೇಲ್ ಜೊತೆಗೆ, ಭಾರತೀಯ ನೌಕಾಪಡೆಗಾಗಿ 6 ಹೆಚ್ಚುವರಿ P-8I ಕಣ್ಗಾವಲು ವಿಮಾನಗಳ ಖರೀದಿಗೂ ಅನುಮತಿ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಮೇಕ್ ಇನ್ ಇಂಡಿಯಾ’ಗೆ ಆದ್ಯತೆ
ಈ ಒಪ್ಪಂದದ ಅನ್ವಯ, ಫ್ರಾನ್ಸ್ನ ದಸ್ಸಾಲ್ಟ್ ಏವಿಯೇಷನ್ ಕಂಪನಿಯಿಂದ 18 ಜೆಟ್ಗಳನ್ನು ಸಿದ್ಧ ಸ್ಥಿತಿಯಲ್ಲಿ (Fly-away condition) ನೇರವಾಗಿ ಖರೀದಿಸಲಾಗುವುದು. ಇನ್ನುಳಿದ 96 ಜೆಟ್ಗಳನ್ನು ಭಾರತದಲ್ಲೇ ತಯಾರಿಸಲಾಗುವುದು. ಇದರಿಂದ ದೇಶೀಯವಾಗಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ದೊಡ್ಡ ವೇಗ ಸಿಗಲಿದೆ.

ರಫೇಲ್ ಜೆಟ್ ವಿಶೇಷತೆ ಏನು?
• ಮಲ್ಟಿ-ರೋಲ್ ಫೈಟರ್: ಇವು ಗಾಳಿಯಿಂದ ಗಾಳಿಗೆ, ಗಾಳಿಯಿಂದ ಭೂಮಿಗೆ ಮತ್ತು ಸಮುದ್ರದ ಮೇಲಿನ ದಾಳಿಗಳನ್ನು ನಡೆಸಲು ಸಮರ್ಥವಾಗಿವೆ.
• ಆಧುನಿಕ ಶಸ್ತ್ರಾಸ್ತ್ರ: ಇವುಗಳಲ್ಲಿ 250 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಹೊಡೆಯುವ ‘ಸ್ಕ್ಯಾಲ್ಪ್’ (SCALP) ಕ್ಷಿಪಣಿ, ‘ಮೆಟಿಯೊರ್’ ಗಾಳಿಯಿಂದ ಗಾಳಿಗೆ ಹಾರುವ ಕ್ಷಿಪಣಿ ಮತ್ತು ‘ಹ್ಯಾಮರ್’ ಅಸ್ತ್ರಗಳಿವೆ.
• ಕಾರ್ಯಾಚರಣೆ: ಕಳೆದ ವರ್ಷದ ‘ಆಪರೇಷನ್ ಸಿಂಧೂರ್’ನಲ್ಲಿ ಪಾಕಿಸ್ತಾನದ ನೆಲೆಗಳ ಮೇಲೆ ನಿಖರ ದಾಳಿ ನಡೆಸುವ ಮೂಲಕ ರಫೇಲ್ ತನ್ನ ತಾಕತ್ತನ್ನು ಈಗಾಗಲೇ ಸಾಬೀತುಪಡಿಸಿದೆ.

P-8I ಪೊಸಿಡಾನ್ ವಿಮಾನಗಳ ಮಹತ್ವ
ಬೋಯಿಂಗ್ ಕಂಪನಿ ತಯಾರಿಸಿದ ಈ ವಿಮಾನಗಳು ಸಮುದ್ರದ ಮೇಲೆ ನಿಗಾ ಇಡಲು ಮತ್ತು ಶತ್ರುಗಳ ಸಬ್ಮರಿನ್ಗಳನ್ನು ಪತ್ತೆಹಚ್ಚಲು ಹೆಸರುವಾಸಿಯಾಗಿವೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ 6 ಹೆಚ್ಚುವರಿ ವಿಮಾನಗಳು ನೌಕಾಪಡೆಗೆ ಅತ್ಯಂತ ಅಗತ್ಯವಾಗಿವೆ. ರಕ್ಷಣಾ ಖರೀದಿ ಮಂಡಳಿಯ (DAC) ಒಪ್ಪಿಗೆಯ ನಂತರ, ಈ ಪ್ರಸ್ತಾವನೆಯು ಅಂತಿಮ ಅನುಮೋದನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ರಕ್ಷಣಾ ವ್ಯವಹಾರಗಳ ಸಂಪುಟ ಸಮಿತಿ (CCS) ಮುಂದೆ ಹೋಗಲಿದೆ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular