ಹೈದರಾಬಾದ್: ತೆಲಂಗಾಣದಲ್ಲಿ ಹತ್ತು ದಿನಗಳ ಗಣೇಶೋತ್ಸವದ ವೇಳೆ ಸಂಭವಿಸಿದ ವಿವಿಧ ಘಟನೆಗಳಲ್ಲಿ 13 ಮಂದಿ ಮೃತಪಟ್ಟಿದ್ದು, 26 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡ ಸೇರಿದ್ದಾರೆ ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (DGP) ಸಿ.ವಿ. ಆನಂದ್ ತಿಳಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ಕರ್ತವ್ಯಕ್ಕಾಗಿ ಹೈದರಾಬಾದ್ಗೆ ನಿಯೋಜಿಸಲಾಗಿದ್ದ ಕೊತ್ತಗುದೆಂ ಸಬ್ ಇನ್ಸ್ಪೆಕ್ಟರ್ ವೆಂಕಣ್ಣ ಮೃತಪಟ್ಟಿರುವುದು ಅತ್ಯಂತ ದುಃಖಕರ ಘಟನೆ ಎಂದು ಡಿಜಿಪಿ ಸಿ.ವಿ. ಆನಂದ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಸೈಬರಾಬಾದ್ ವ್ಯಾಪ್ತಿಯ ಪಟಾನ್ಚೇರುನಲ್ಲಿ ಆರು ಮಂದಿ ಮೃತಪಟ್ಟಿರುವುದು ಕೂಡ ಅತ್ಯಂತ ವಿಷಾದನೀಯ ಘಟನೆ ಎಂದು ಅವರು ಹೇಳಿದ್ದಾರೆ. ಶುಕ್ರವಾರ ಮುಂಜಾನೆ ಖೈರತಾಬಾದ್ನಲ್ಲಿ ಶಿವ ಎಂಬ ವ್ಯಕ್ತಿ ಮೃತಪಟ್ಟಿದ್ದು, ನಿರ್ಮಲ್ನಲ್ಲಿ ಮತ್ತೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೆಲವು ಸಾವುಗಳಿಗೆ ಗಣೇಶೋತ್ಸವದ ಸಂದರ್ಭದಲ್ಲಿ ಬಳಸಲಾದ ಅತಿಯಾದ ಶಬ್ದದ ಡಿಜೆ ವ್ಯವಸ್ಥೆಯೂ ಕಾರಣವಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.ರಾಜ್ಯದ ವಿವಿಧೆಡೆ ನಡೆದ ಘಟನೆಗಳಲ್ಲಿ ಒಟ್ಟು 26 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 17 ಮಂದಿ ಮಲ್ಕಾಜ್ಗಿರಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಯಗೊಂಡಿದ್ದಾರೆ.
ಈ ಬಾರಿ ದಾಖಲೆ ಪ್ರಮಾಣದ ಗಣೇಶ ಮೂರ್ತಿಗಳ ನೋಂದಣಿ
ಈ ವರ್ಷ ತೆಲಂಗಾಣದಲ್ಲಿ ಗಣೇಶ ಮೂರ್ತಿಗಳ ನೋಂದಣಿಯಲ್ಲೂ ದಾಖಲೆ ನಿರ್ಮಾಣವಾಗಿದೆ. ರಾಜ್ಯದಾದ್ಯಂತ 1.24 ಲಕ್ಷ ಗಣೇಶ ಮೂರ್ತಿಗಳು ಅಧಿಕೃತ ಪೋರ್ಟಲ್ನಲ್ಲಿ ನೋಂದಣಿಯಾಗಿವೆ. ಕಳೆದ ವರ್ಷ ಈ ಸಂಖ್ಯೆ 1.15 ಲಕ್ಷ ಇತ್ತು.
ಶುಕ್ರವಾರ ಸಂಜೆ ವೇಳೆಗೆ ರಾಜ್ಯದಾದ್ಯಂತ ಸುಮಾರು 88,000 ಗಣೇಶ ಮೂರ್ತಿಗಳ ವಿಸರ್ಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಉಳಿದ ಗಣೇಶ ಮೂರ್ತಿಗಳ ವಿಸರ್ಜನೆಯನ್ನೂ ಎಲ್ಲಾ ಪೊಲೀಸ್ ಕಮಿಷನರೇಟ್ಗಳ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆಯೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ. ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪೊಲೀಸ್ ಇಲಾಖೆಯಿಂದ ನಿರಂತರ ಭದ್ರತಾ ನಿಗಾ ಮುಂದುವರಿಯಲಿದೆ ಎಂದು ಸಿ.ವಿ. ಆನಂದ್ ತಿಳಿಸಿದ್ದಾರೆ.
ಪರಂಪರಾಗತ ಕೃಷಿ ವಿಕಾಸ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ
ಧಾರವಾಡ : ಧಾರವಾಡ ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ 2026-27 ನೇ ಸಾಲಿನ ಕೇಂದ್ರ ಪುರಸ್ಕøತ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸಾವಯವ ಕೃಷಿಗೆ ತೋಟಗಾರಿಕೆ ಬೆಳೆಗಾರರಿಂದ ಅರ್ಜಿ ಆವ್ಹಾನಿಸಲಾಗಿದೆ.
ಆಸಕ್ತಿಯುಳ್ಳ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ, ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಈ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ:0836-2744376, ಯುಗೇಂದ್ರ ಕೆ, ಸತೋಅ, ರೈಸಂಕೇ, ಅಮ್ಮಿನಬಾವಿ-6366207155, ಶಿವಾನಂದ ಸಂಶುದ್ದಿ, ಸತೋಅ, ರೈಸಂಕೇ, ಗರಗ–7411342383, ಮಹಾಂತೇಶ ಯಮಕನಮರಡಿ, ಧಾರವಾಡ-8310143782, ಶಿವರಾಜ ಸತ್ತಿಗೇರಿ, ಸತೋಅ, ರೈಸಂಕೇ, ಅಳ್ನಾವರÀ – 9353895519 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಇಮ್ತಿಯಾಜ್ ಚಂಗಾಪುರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

