HomeBusinessಗಗನಕ್ಕೇರುತ್ತಿದ್ದ ಚಿನ್ನಕ್ಕೆ ಬ್ರೇಕ್:ಒಂದೇ ದಿನದಲ್ಲಿ ₹2,700 ಡೌನ್: ಚಿನ್ನ ಕೊಳ್ಳುವವರಿಗೆ ಇದುವೇ ಗೋಲ್ಡನ್ ಚಾನ್ಸ್

ಗಗನಕ್ಕೇರುತ್ತಿದ್ದ ಚಿನ್ನಕ್ಕೆ ಬ್ರೇಕ್:ಒಂದೇ ದಿನದಲ್ಲಿ ₹2,700 ಡೌನ್: ಚಿನ್ನ ಕೊಳ್ಳುವವರಿಗೆ ಇದುವೇ ಗೋಲ್ಡನ್ ಚಾನ್ಸ್

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಬುಧವಾರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಕಳೆದ ಮೂರೇ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ದರ ಸುಮಾರು ₹5,000ರಷ್ಟು ಏರಿಕೆಯಾಗಿತ್ತು. ಆದರೆ ಇಂದು ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ₹270 ಇಳಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆ ಸ್ಥಿತಿ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ 17 ಡಾಲರ್ ಇಳಿದು 5,038 ಡಾಲರ್‌ಗೆ ತಲುಪಿದೆ. ಬೆಳ್ಳಿ ದರ ಶೇ.1.20ರಷ್ಟು ಕುಸಿದು ಪ್ರತಿ ಔನ್ಸ್‌ಗೆ 81.55 ಡಾಲರ್ ಮಟ್ಟದಲ್ಲಿ ವ್ಯವಹಾರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಲ್ಲಿ ಇಂದಿನ ಚಿನ್ನದ ದರ

ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹250 ಇಳಿಕೆಯಾಗಿದ್ದು, ₹1,45,300ಕ್ಕೆ ತಲುಪಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂಗೆ ₹270 ಇಳಿಕೆಯಾಗಿ ₹1,58,510 ಆಗಿದೆ.

ಭಾರತದಲ್ಲಿ ಇಂದಿನ ಚಿನ್ನದ ದರ ವಿವರ

1 ಗ್ರಾಂ (24K): ₹15,851 (₹27 ಇಳಿಕೆ)

8 ಗ್ರಾಂ: ₹1,26,808 (₹216 ಇಳಿಕೆ)

10 ಗ್ರಾಂ: ₹1,58,510 (₹270 ಇಳಿಕೆ)

100 ಗ್ರಾಂ: ₹15,85,100 (₹2,700 ಇಳಿಕೆ)

ಚಿನ್ನದ ದರ ಯಾವಾಗ ಇಳಿಕೆಯಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಅವಕಾಶವೆಂದು ಮಾರುಕಟ್ಟೆ ವಲಯಗಳು ಹೇಳುತ್ತಿವೆ.

ಬೆಳ್ಳಿ ದರ

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದರೂ, ಬೆಳ್ಳಿ ದರವು ಸದ್ಯಕ್ಕೆ ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಇಂದು ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿಯ ದರ ₹2.9 ಲಕ್ಷದ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಇಳಿಕೆಯ ಹಾದಿ ಹಿಡಿದಿರುವುದರಿಂದ, ದೇಶೀಯ ಮಾರುಕಟ್ಟೆಯಲ್ಲೂ ಮುಂದಿನ ದಿನಗಳಲ್ಲಿ ಬೆಳ್ಳಿ ದರ ಮತ್ತಷ್ಟು ತಗ್ಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ.

ಭಾರತದ ವಿವಿಧ ನಗರಗಳಲ್ಲಿ ಇಂದಿನ 24K ಚಿನ್ನದ ಬೆಲೆ

ನಗರ24K ಚಿನ್ನದ ಬೆಲೆ (ರೂ.)

ಚೆನ್ನೈ₹15,928

ದೆಹಲಿ₹15,866

ವಡೋದರಾ₹15,856

ಅಹಮದಾಬಾದ್₹15,856

ಬೆಂಗಳೂರು₹15,851

ಮುಂಬೈ₹15,851

ಕೋಲ್ಕತ್ತಾ₹15,851

ಹೈದರಾಬಾದ್₹15,851

ಕೇರಳ₹15,851

ಪುಣೆ₹15,851

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular