HomeLatest NewsPariksha Pe Charcha 2026 : ಮೊದಲು ಮನಸ್ಸು ಗೆಲ್ಲಿ, ಆಮೇಲೆ ಪುಸ್ತಕ ಹಿಡಿಯಿರಿ :...

Pariksha Pe Charcha 2026 : ಮೊದಲು ಮನಸ್ಸು ಗೆಲ್ಲಿ, ಆಮೇಲೆ ಪುಸ್ತಕ ಹಿಡಿಯಿರಿ : ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ.!

ನವದೆಹಲಿ: ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha – PPC) ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನಡೆಸುವ ಒಂದು ವಿಶಿಷ್ಟ ಸಂವಾದ ಕಾರ್ಯಕ್ರಮವಾಗಿದೆ.

ಪರೀಕ್ಷೆಯ ಒತ್ತಡವನ್ನು ದೂರಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು ನೀಡಿದ ಪ್ರಮುಖ ಸಲಹೆಗಳು ಇಲ್ಲಿವೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಎದುರಿಸುವ ಒತ್ತಡ (Stress) ಮತ್ತು ಆತಂಕವನ್ನು (Anxiety) ಕಡಿಮೆ ಮಾಡುವುದು. ಪರೀಕ್ಷೆಯನ್ನು ಒಂದು ‘ಹಬ್ಬ’ದಂತೆ ಸಂಭ್ರಮದಿಂದ ಎದುರಿಸಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ.

  1. ಓದಿನ ಬಗ್ಗೆ ಪ್ರಧಾನಿಯವರ ‘ಗುರುಮಂತ್ರ’:
    ಓದಿನ ಪ್ರಕ್ರಿಯೆಯನ್ನು ವಿವರಿಸುತ್ತಾ ಪ್ರಧಾನಿ ಹೀಗೆ ಹೇಳಿದರು:
    “ಮೊದಲು ಮನಸ್ಸನ್ನು ಸಜ್ಜುಗೊಳಿಸಿ (ಉಳುಮೆ ಮಾಡಿ), ನಂತರ ಮನಸ್ಸನ್ನು ಏಕಾಗ್ರಗೊಳಿಸಿ (ಜೋಡಿಸಿ), ಆಮೇಲೆ ನೀವು ಓದಬೇಕಾದ ವಿಷಯಗಳನ್ನು ನಿಮ್ಮ ಮುಂದೆ ಇಟ್ಟುಕೊಳ್ಳಿ. ಹೀಗೆ ಮಾಡಿದರೆ ನೀವು ಯಾವಾಗಲೂ ಯಶಸ್ವಿಯಾಗುತ್ತೀರಿ.”
    ಅಲ್ಲದೆ, “ನಮ್ಮ ಗುರಿ ಹೇಗಿರಬೇಕೆಂದರೆ, ಅದು ನಮ್ಮ ತಲುಪುವ ಹಾದಿಯಲ್ಲಿರಬೇಕು (Within Reach), ಆದರೆ ತಕ್ಷಣವೇ ಕೈಗೆ ಸಿಗುವಂತಿರಬಾರದು (Not in Grip)” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
  2. ಅಸ್ಸಾಮಿ ‘ಗಮೋಸಾ’ ಹಾಗೂ ಮಹಿಳಾ ಸಬಲೀಕರಣ:
    ವಿದ್ಯಾರ್ಥಿಗಳನ್ನು ಅಸ್ಸಾಮಿ ‘ಗಮೋಸಾ’ (ಸಾಂಪ್ರದಾಯಿಕ ವಸ್ತ್ರ) ನೀಡಿ ಬರಮಾಡಿಕೊಂಡ ಪ್ರಧಾನಿ, ಅದರ ವಿಶೇಷತೆಯನ್ನು ವಿವರಿಸಿದರು: “ಗಮೋಸಾ ನನಗೆ ಅತ್ಯಂತ ಪ್ರಿಯವಾದುದು. ಇದು ಈಶಾನ್ಯ ಭಾರತದ, ವಿಶೇಷವಾಗಿ ಅಸ್ಸಾಂನ ಮಹಿಳಾ ಸಬಲೀಕರಣಕ್ಕೆ ಸಾಕ್ಷಿ. ಮಹಿಳೆಯರು ಇದನ್ನು ಬಹಳ ಪ್ರೀತಿ ಮತ್ತು ಶ್ರದ್ಧೆಯಿಂದ ಮನೆಯಲ್ಲೇ ನೇಯುತ್ತಾರೆ. ಇದು ಮಹಿಳೆಯರ ಮೇಲಿನ ಗೌರವದ ಸಂಕೇತ.”
  3. ಶಿಕ್ಷಣ ಹೊರೆಯಾಗಬಾರದು:
    “ಶಿಕ್ಷಣವನ್ನು ಎಂದಿಗೂ ಹೊರೆ ಎಂದು ಭಾವಿಸಬೇಡಿ. ಅರೆಬರೆ ಶಿಕ್ಷಣ ಜೀವನದಲ್ಲಿ ಯಶಸ್ಸು ತರುವುದಿಲ್ಲ. ಕೇವಲ ಅಂಕಗಳ ಮೇಲೆ ಗಮನ ಹರಿಸುವ ಬದಲು, ಜೀವನವನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸಿ. ಇದು ತರಗತಿ ಮತ್ತು ಪರೀಕ್ಷೆಗಳಿಗಿಂತಲೂ ಮಿಗಿಲಾದದ್ದು” ಎಂದು ಮೋದಿ ಹೇಳಿದರು.
  4. “ನಾನು ಕಳೆದಿದ್ದನ್ನು ಎಣಿಸುವುದಿಲ್ಲ, ಉಳಿದಿದ್ದನ್ನು ಎಣಿಸುತ್ತೇನೆ”:
    ತಮ್ಮ ವೈಯಕ್ತಿಕ ಜೀವನದ ಸ್ವಾರಸ್ಯಕರ ಪ್ರಸಂಗವೊಂದನ್ನು ಹಂಚಿಕೊಂಡ ಪ್ರಧಾನಿ, “ನನ್ನ 75ನೇ ಜನ್ಮದಿನದಂದು ಒಬ್ಬ ನಾಯಕರು ಕರೆ ಮಾಡಿ ಶುಭ ಕೋರಿದರು. ಆಗ ನಾನು ಅವರಿಗೆ ಹೇಳಿದೆ – 75 ವರ್ಷ ಮುಗಿದಿರಬಹುದು, ಆದರೆ ಇನ್ನೂ 25 ವರ್ಷ ಬಾಕಿ ಇದೆ! ನಾನು ಯಾವಾಗಲೂ ಕಳೆದ ಹೋದ ದಿನಗಳಿಗಿಂತ, ಮುಂದೆ ಉಳಿದಿರುವ ದಿನಗಳ ಬಗ್ಗೆ ಯೋಚಿಸುತ್ತೇನೆ” ಎಂದರು.
  5. ಇಂಟರ್ನೆಟ್ ಮತ್ತು ಗೇಮಿಂಗ್ ಕುರಿತು ಸಲಹೆ:
    • ಉಚಿತ ಸಮಯ ವ್ಯರ್ಥ ಮಾಡಬೇಡಿ: ಭಾರತದಲ್ಲಿ ಇಂಟರ್ನೆಟ್ ಅಗ್ಗವಾಗಿದೆ ಎಂಬ ಕಾರಣಕ್ಕೆ ಸಮಯ ವ್ಯರ್ಥ ಮಾಡಬೇಡಿ.
    • ಗೇಮಿಂಗ್ ಒಂದು ಕೌಶಲ: ಗೇಮಿಂಗ್ ಎನ್ನುವುದು ಕೇವಲ ಮನರಂಜನೆಯಲ್ಲ, ಅದೊಂದು ಕೌಶಲ (Skill). ಅದು ಮೆದುಳಿನ ವಿಕಾಸಕ್ಕೆ ಒಳ್ಳೆಯದು. ಆದರೆ ಅದರಲ್ಲಿ ಉತ್ತಮ ಗುಣಮಟ್ಟದ ಆಟಗಳನ್ನು ಆರಿಸಿ ನಿಮ್ಮ ಪರಿಣತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
  6. ಜ್ಞಾನ ಮತ್ತು ಕೌಶಲದ ನಡುವೆ ಸಮತೋಲನ:
    “ಜೀವನದಲ್ಲಿ ಸಮತೋಲನ ಬಹಳ ಮುಖ್ಯ. ಲೈಫ್ ಸ್ಕಿಲ್ ಮತ್ತು ಪ್ರೊಫೆಷನಲ್ ಸ್ಕಿಲ್ ಎರಡೂ ಅಗತ್ಯ. ಜ್ಞಾನವಿಲ್ಲದೆ ಯಾವುದೇ ಕೌಶಲ ಬರಲು ಸಾಧ್ಯವಿಲ್ಲ. ಕೌಶಲದ ಆರಂಭವೇ ಜ್ಞಾನದಿಂದ ಆಗುತ್ತದೆ” ಎಂದು ಮೋದಿ ವಿವರಿಸಿದರು.
  7. ಶಿಕ್ಷಕರಿಗೆ ಸಲಹೆ: ವಿದ್ಯಾರ್ಥಿಗಳ ವೇಗಕ್ಕಿಂತ ಶಿಕ್ಷಕರ ವೇಗ ಒಂದು ಹೆಜ್ಜೆ ಮುಂದಿರಬೇಕು ಎಂದು ಪ್ರಧಾನಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular