ಊಟವಾದ ಬಳಿಕ ಬಾಯಿಗೆ ತಾಜಾತನ ನೀಡುವ ಮುಖವಾಸ್ ಸೇವಿಸುವುದು ಬಹುತೇಕರ ಅಭ್ಯಾಸ. ನೀವು ಪಾನ್ (ವೀಳ್ಯದೆಲೆ) ಸುವಾಸನೆಯನ್ನು ಇಷ್ಟಪಡುವವರಾಗಿದ್ದು, ಆರೋಗ್ಯಕರ ಆಯ್ಕೆಯನ್ನು ಹುಡುಕುತ್ತಿದ್ದರೆ ಈ ಕೋಲ್ಕತ್ತಾ ಶೈಲಿಯ ‘ಪಾನ್ ಮುಖವಾಸ್’ ಖಂಡಿತ ನಿಮಗಾಗಿ. ಸೋಂಪು, ಒಣ ಗುಲಾಬಿ ದಳ, ಕೊಬ್ಬರಿ ಧೂಳು, ಬೆರ್ರಿಗಳು ಹಾಗೂ ಪಾನ್ ಚೂರುಗಳ ಮಿಶ್ರಣದಿಂದ ತಯಾರಾಗುವ ಈ ಮುಖವಾಸ್ ಸಿಹಿ ಹಾಗೂ ತಂಪಾದ ಸುವಾಸನೆಯನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ ಭರಿತ ಮುಖವಾಸ್‌ಗಳಿಗೆ ಹೋಲಿಸಿದರೆ, ಹೆಚ್ಚುವರಿ ಸಕ್ಕರೆ ಬಳಸದೆ ಮಾಡುವ ಈ ಹೋಮ್‌ಮೇಡ್ ಮುಖವಾಸ್ ಆರೋಗ್ಯಕ್ಕೂ ಅತ್ಯುತ್ತಮ.
ಅಗತ್ಯವಿರುವ ಪದಾರ್ಥಗಳು:
-
ಸೋಂಪು (ಫೆನ್ನೆಲ್ ಸೀಡ್ಸ್) – 1/2 ಕಪ್
-
ಒಣಗಿದ ಗುಲಾಬಿ ದಳಗಳು – 2 ಟೇಬಲ್ ಸ್ಪೂನ್
-
ಧನಿಯಾ (ಕೊತ್ತಂಬರಿ ಬೀಜ) – 2 ಟೇಬಲ್ ಸ್ಪೂನ್
-
ಏಲಕ್ಕಿ ಪುಡಿ – 1 ಟೀಸ್ಪೂನ್
-
ಒಣ ಕೊಬ್ಬರಿ ತುರಿ (ಡೆಸಿಕೇಟೆಡ್ ಕೊಕೊನಟ್) – 1/4 ಕಪ್
-
ಮಿಕ್ಸ್ಡ್ ಬೆರ್ರಿಗಳು – 2 ಟೇಬಲ್ ಸ್ಪೂನ್
-
ಗುಲ್ಕಂದ್ – 2 ಟೇಬಲ್ ಸ್ಪೂನ್
-
ಪಾನ್ ಫ್ಲೇಕ್ಸ್ (ವೀಳ್ಯದೆಲೆ ಚೂರುಗಳು) – 2 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
-
ಹುರಿಯುವುದು: ಬಾಣಲೆಯನ್ನು ಬಿಸಿ ಮಾಡಿ, ಅದಕ್ಕೆ ಸೋಂಪು, ಒಣಗಿದ ಗುಲಾಬಿ ದಳಗಳು, ಧನಿಯಾ, ಒಣ ಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.
-
ಸಣ್ಣ ಉರಿಯಲ್ಲಿ ಬೆರೆಸಿ: ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಸುಮಾರು 2 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಾ ಹುರಿಯಿರಿ.
-
ತಣ್ಣಗಾಗಲು ಬಿಡಿ: ಗ್ಯಾಸ್ ಆಫ್ ಮಾಡಿ, ಈ ಮಿಶ್ರಣ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
-
ಇತರ ಪದಾರ್ಥ ಸೇರಿಸಿ: ಮಿಶ್ರಣ ತಣ್ಣಗಾದ ನಂತರ ಗುಲ್ಕಂದ್, ಪಾನ್ ಫ್ಲೇಕ್ಸ್ ಮತ್ತು ಮಿಕ್ಸ್ಡ್ ಬೆರ್ರಿಗಳನ್ನು ಸೇರಿಸಿ.
-
ಚನ್ನಾಗಿ ಮಿಕ್ಸ್ ಮಾಡಿ: ಎಲ್ಲಾ ಪದಾರ್ಥಗಳು ಒಂದಕ್ಕೊಂದು ಸರಿಯಾಗಿ ಬೆರೆಯುವಂತೆ ಚೆನ್ನಾಗಿ ಕಲಸಿ.
-
ಶೇಖರಣೆ: ತಯಾರಾದ ಮುಖವಾಸ್ ಅನ್ನು ಗಾಳಿಯಾಡದ ಡಬ್ಬಿಯಲ್ಲಿ (Airtight container) ಶೇಖರಿಸಿಡಿ. ಇದನ್ನು ಸುಮಾರು 2 ತಿಂಗಳವರೆಗೆ ಇಟ್ಟು ಬಳಸಿ ಸವಿಯಬಹುದು.

