
ಉತ್ತರ ಕೊರಿಯಾ ಸರ್ವಾಧಿಕಾರವಿರುವ ದೇಶ. ಅಲ್ಲಿ ಅತ್ಯಂತ ಚಿತ್ರವಿಚಿತ್ರವಾದ ಕಾನೂನುಗಳಿವೆ. ಉತ್ತರ ಕೊರಿಯಾದಲ್ಲಿ ವಿದೇಶೀ ಸಂಗೀತ ಕೇಳಿದ್ರೆ ಅಥವಾ ಅಂತರಾಷ್ಟ್ರೀಯ ಫೋನ್ ಕರೆ ಮಾಡಿದ್ರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ರಾಷ್ಟ್ರಾಧ್ಯಕ್ಷರನ್ನೇ ದೇವರಂತೆ ಪೂಜಿಸಬೇಕು. ಕಿಮ್ ಕುಟುಂಬಕ್ಕೆ ಅಗೌರವ ತೋರಿದ್ರೆ ಕಠಿಣ ಶಿಕ್ಷೆ ಗ್ಯಾರಂಟಿ.
ಪುರುಷ ಸರ್ಕಾರಿ ಉದ್ಯೋಗಿಗಳು ಮಾತ್ರ ವಾಹನ ಚಾಲನೆ ಮಾಡಬಹುದು. ಸರ್ಕಾರದ ನಿಯಮ ಏನಂದ್ರೆ 100 ಜನರ ಪೈಕಿ ಒಬ್ಬರಿಗೆ ಮಾತ್ರ ಕಾರನ್ನು ಹೊಂದಲು ಅವಕಾಶವಿದೆ.
ಮಹಿಳೆಯರು ಕಾರ್ ಡ್ರೈವ್ ಮಾಡುವಂತಿಲ್ಲ. ಒಂದು ವೇಳೆ ಅವರು ಟ್ರಾಫಿಕ್ ಅಧಿಕಾರಿಯಾಗಿದ್ದರೂ ಕಾರು ಚಲಾಯಿಸಲು ಅವಕಾಶವಿಲ್ಲ.
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ 2 ಸಂಗ್ 1994ರಲ್ಲಿ ನಿಧನ ಹೊಂದಿದ್ದ. ತದನಂತರ ಜೂನ್ 8ನ್ನು ಪ್ರತಿವರ್ಷ ಶೋಕಾಚರಣೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಯಾರೂ ಮದ್ಯಪಾನ ಸೇರಿದಂತೆ ಕೆಲವೊಂದು ಚಟುವಟಿಕೆಗಳನ್ನು ಮಾಡುವಂತಿಲ್ಲ.

ಅಷ್ಟೇ ಅಲ್ಲ ಆ ದಿನ ಯಾರು ಕೂಡ ಜೋರಾಗಿ ಮಾತನಾಡುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ಅದನ್ನು ಅಗೌರವವೆಂದು ಪರಿಗಣಿಸಲಾಗುತ್ತದೆ.
ಜೂನ್ 8ರಂದು ನೃತ್ಯಕ್ಕೂ ನಿರ್ಬಂಧ ಹೇರಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದ್ರೆ ಅವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ಕೊಂದು ಹಾಕಲಾಗುತ್ತದೆ.

ಅಧ್ಯಕ್ಷರ ಭಾಷಣದ ವೇಳೆ ನಿದ್ದೆ ಮಾಡಿದ್ರೆ ದೊಡ್ಡ ಅಪಾಯ ತಂದುಕೊಂಡಂತೆ. ಕಿಮ್ ಜಾಂಗ್ ಉನ್ ಕಾರ್ಯಕ್ರಮದಲ್ಲಿ ನಿದ್ದೆ ಹೋಗಿದ್ದಕ್ಕೆ ಉತ್ತರ ಕೊರಿಯಾದ ರಕ್ಷಣಾ ಅಧ್ಯಕ್ಷರನ್ನೇ ನೇಣಿಗೇರಿಸಲಾಗಿತ್ತು.
ಉತ್ತರ ಕೊರಿಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ನೆಪಮಾತ್ರಕ್ಕೆ ಇನ್ನೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ದೇಶದಲ್ಲಿ ಗಾಂಜಾ ನಿಷೇಧಿಸಲಾಗಿದೆ. ಆದ್ರೆ ಉತ್ತರ ಕೊರಿಯಾದಲ್ಲಿ ಗಾಂಜಾ ಮತ್ತು ಡ್ರಗ್ಸ್ ಸೇವನೆ, ಮಾರಾಟಕ್ಕೆ ನಿರ್ಬಂಧವಿಲ್ಲ.

ಅಧ್ಯಕ್ಷರಿಗೆ ಯಾವಾಗಲೂ ಡಿಯರ್ ಅಥವಾ ಸುಪ್ರೀಮ್ ಎಂದೇ ಸಂಬೋಧಿಸಬೇಕು. ಡಿಯರ್ ಕಿಮ್ ಅಥವಾ ಸುಪ್ರೀಮ್ ಕಿಮ್ ಅಂತಾ ಕರೆಯಬೇಕು. 2007ರಲ್ಲಿ ಅಂತರಾಷ್ಟ್ರೀಯ ಕರೆ ಮಾಡಿದ್ದಾನೆ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲಾಗಿತ್ತು.
ಇಲ್ಲಿ ಬಾಸ್ಕೆಟ್ ಬಾಲ್ ಗೆ ಪ್ರತ್ಯೇಕ ನಿಯಮವಿದೆ. ಶತ್ರುರಾಷ್ಟ್ರ ಅಮೆರಿಕದಲ್ಲಿ ಜನ್ಮ ತಳೆದ ಕ್ರೀಡೆಯಾಗಿದ್ದರಿಂದ ಅದರ ನಿಯಮವನ್ನೇ ಉತ್ತರ ಕೊರಿಯಾ ಬದಲಾಯಿಸಿಕೊಂಡಿದೆ.

ಕೆಲವೊಂದು ಉಡುಪುಗಳನ್ನು ಕೂಡ ಧರಿಸದಂತೆ ನಿರ್ಬಂಧಿಸಲಾಗಿದೆ. ಅನುಮತಿಯಿಲ್ಲದೇ ವಿದೇಶಗಳಿಗೆ ಓಡಿಹೋಗುವಂತಿಲ್ಲ, ಪ್ರಯಾಣಿಸುವಂತಿಲ್ಲ. ನೆರೆರಾಷ್ಟ್ರ ದಕ್ಷಿಣ ಕೊರಿಯಾದಲ್ಲಿ ರಜೆ ಅಥವಾ ವೀಕೆಂಡ್ ಕಳೆಯಲು ಸಹ ಅನುಮತಿ ಪಡೆಯಬೇಕು.
ಪ್ರವಾಸಿಗರನ್ನು ನಿಯಂತ್ರಿಸಲು ಗಾರ್ಡ್ ಗಳನ್ನು ನೇಮಿಸಲಾಗುತ್ತದೆ. ಅವರ ಸಲಹೆ ಸೂಚನೆಯನ್ನು ಪಾಲಿಸಲೇಬೇಕು. ಇಂಟರ್ನೆಟ್ ಗೂ ನಿರ್ಬಂಧ ಹೇರಿರುವ ಏಕೈಕ ದೇಶ ಉತ್ತರ ಕೊರಿಯಾ. ಸರ್ಕಾರದ ನಿಗಾ ಅಡಿಯಲ್ಲಿ ಕೆಲವೇ ಕೆಲವು ಅಧಿಕಾರಿಗಳಿಗೆ ಮಾತ್ರ ಇಂಟರ್ನೆಟ್ ಬಳಸಲು ಅನುಮತಿ ಇದೆ.
ವೃತ್ತಿಯ ಆಯ್ಕೆಗೂ ಅಲ್ಲಿ ಜನರಿಗೆ ಸ್ವಾತಂತ್ರ್ಯವಿಲ್ಲ. ಅದನ್ನು ಕೂಡ ಸರ್ಕಾರವೇ ನಿರ್ಧರಿಸುತ್ತದೆ. ಕಾನೂನು ಉಲ್ಲಂಘಿಸಿದವರನ್ನು ಜೀತಕ್ಕಿರಿಸಿಕೊಳ್ಳಲಾಗುತ್ತದೆ.

ಮಹಿಳೆಯರು ಪ್ಯಾಂಟ್ ಧರಿಸಬಾರದು, ಸೈಕಲ್ ಓಡಿಸಬಾರದು. ಮೊಣಕಾಲಿಗಿಂತ ಉದ್ದಕ್ಕಿರುವ ಸ್ಕರ್ಟ್ ಮಾತ್ರ ಧರಿಸಬಹುದು. ಮನಸ್ಸಿಗೆ ಬಂದ ಹೇರ್ ಕಟ್ ಮಾಡಿಸಿಕೊಳ್ಳಲು ಅಲ್ಲಿ ಅವಕಾಶವಿಲ್ಲ. 2013ರಲ್ಲಿ ಅಧಿಕಾರಕ್ಕೆ ಬಂದ ಕಿಮ್ ಜಾಂಗ್ ಉನ್ ಕೆಲವೊಂದು ಹೇರ್ ಸ್ಟೈಲ್ ಗಳನ್ನು ಪಟ್ಟಿ ಮಾಡಿದ್ದಾರೆ. ಅವನ್ನೇ ಎಲ್ಲರೂ ಮಾಡಿಸಿಕೊಳ್ಳಬೇಕು.
ಜನರು ಯಾವ ಪ್ರದೇಶದಲ್ಲಿ ವಾಸಿಸಬೇಕು ಅನ್ನೋದನ್ನು ಕೂಡ ಸರ್ಕಾರವೇ ನಿರ್ಧರಿಸುತ್ತದೆ. ಅವರ ಸ್ಟೇಟಸ್ ಅನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಮನೆಗೆ ಬೆಂಕಿಯೇನಾದ್ರೂ ಬಿದ್ರೆ ಮೊದಲು ಕೊರಿಯಾದ ರಾಜಕೀಯ ನಾಯಕರ ಫೋಟೋಗಳನ್ನು ಕಾಪಾಡಬೇಕು. ನಂತರ ಅವರ ಪ್ರಾಣ ಮತ್ತು ಅಮೂಲ್ಯ ವಸ್ತುಗಳ ಸರದಿ.
ಮಹಿಳೆಯರು ಬೆಲ್ಲಿ ಬಟನ್ ಬಳಸುವಂತಿಲ್ಲ. ಬಿಕಿನಿ ಧರಿಸುವುದನ್ನೂ ನಿರ್ಬಂಧಿಸಲಾಗಿದೆ. ಸಿನೆಮಾ ನೋಡೋದು ಅಥವಾ ವಿದೇಶೀ ಸಂಗೀತ ಕೇಳುವುದಕ್ಕೂ ನಿಷೇಧವಿದೆ. ಭಾರತೀಯ ಸಿನೆಮಾ ನೋಡಿದ್ರೆ ಜೈಲಿಗೆ ಹಾಕಲಾಗುತ್ತದೆ, ಅಮೆರಿಕದ ಚಿತ್ರ ವೀಕ್ಷಿಸಿದವರನ್ನು ಗಲ್ಲಿಗೇರಿಸಲಾಗುತ್ತದೆ.

ಅಧ್ಯಕ್ಷರ ಹೆಸರು ಕಿಮ್ ಜಾಂಗ್ ಉನ್ ಆಗಿರೋದ್ರಿಂದ ಈ ಹೆಸರನ್ನು ಮತ್ಯಾರೂ ಇಟ್ಟುಕೊಳ್ಳುವಂತಿಲ್ಲ. ಕಿಮ್ ಅನ್ನೊ ಹೆಸರಿನವರಿಗೆಲ್ಲ ಅದನ್ನು ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ವಿದೇಶಿ ಸಂಪ್ರದಾಯ, ಸಂಸ್ಕೃತಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿ ಚರ್ಚ್ ಗಳಿವೆ ಆದ್ರೂ ಬೈಬಲ್ ಹಂಚುವಂತಿಲ್ಲ. ಬೈಬಲ್ ಅನ್ನು ಬಾತ್ ರೂಮಿನಲ್ಲಿ ಮರೆತು ಬಂದಿದ್ದ ಅಮೆರಿಕದ ಜೆಫ್ರಿ ಫೌಲ್ ಗೆ 5 ತಿಂಗಳು ಜೈಲು ಶಿಕ್ಷೆಯಾಗಿತ್ತು.
ಪ್ರವಾಸಿಗರನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುತ್ತದೆ. ಗಡಿ ದಾಟುತ್ತಿದ್ದಂತೆ ಅವರ ಬಳಿಯಿರುವ ಕ್ಯಾಮರಾ, ಲ್ಯಾಪ್ಟಾಪ್, ಮೊಬೈಲ್ ವಶಪಡಿಸಿಕೊಳ್ಳಲಾಗುತ್ತದೆ. ವಾಪಸ್ ಬರುವಾಗ ಅದನ್ನು ಹಿಂದಿರುಗಿಸುತ್ತಾರೆ.
ಉತ್ತರ ಕೊರಿಯಾದ ಜನರಿಗೆ ರಜೆಯೇ ಇಲ್ಲ. ವಾರದ 6 ದಿನಗಳೂ ಕೆಲಸ, 7ನೇ ದಿನ ಕೂಡ ಅವರು ಸ್ವಯಂಪ್ರೇರಿತರಾಗಿ ಕೆಲಸ ಮಾಡಬೇಕು ಅನ್ನೋ ನಿಯಮವಿದೆ.