ಚಂಡೀಗಢ: ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದದ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಮತ್ತೆ ಪೆರೋಲ್ ನೀಡಲಾಗಿದೆ.
ಹರಿಯಾಣದ ರೋಹ್ಟಕ್ ಸುನಾರಿಯಾ ಜೈಲಿನಲ್ಲಿರುವ ಗುರ್ಮಿತ್ ಸಿಂಗ್ ಗೆ 40 ದಿನಗಳ ಕಾಲ ಪೆರೊಲ್ ನೀಡಲಾಗಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿಯೂ ಗುರ್ಮಿತ್ ಸಿಂಗ್ 40 ದಿನಗಳ ಪೆರೊಲ್ ಪಡೆದಿದ್ದರು. ಜೈಲುಶಿಕ್ಷೆಗೆ ಗುರಿಯಾದ ಬಳಿಕ ಗುರ್ಮಿತ್ ರಾಮ್ ರಹೀಮ್ ಸಿಂಗ್ ಪಡೆಯುತ್ತಿರುವ 15ನೇ ಬಾರಿಯ ಪೆರೊಲ್ ಇದಾಗಿದೆ.
ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಗುರ್ಮಿತ್ ಸಿಂಗ್ 2017ರಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

