HomeLive NewsBIG NEWS: ಕೋಳಿ ಅಂಕಕ್ಕೆ ತಡೆ: ದೈವದ ಮೊರೆ ಹೋದ ಕಂಕನಾಡಿ ಗರೋಡಿ ಆಡಳಿತ ಸಮಿತಿ

BIG NEWS: ಕೋಳಿ ಅಂಕಕ್ಕೆ ತಡೆ: ದೈವದ ಮೊರೆ ಹೋದ ಕಂಕನಾಡಿ ಗರೋಡಿ ಆಡಳಿತ ಸಮಿತಿ

ಮಂಗಳೂರು: ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರು ತಡೆ ನೀಡಿರುವ ವಿಚಾರ ಇದೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ್ದು, ಗರೋಡಿ ಆಡಳಿತ ಸಮಿತಿ ದೈವದ ಮೊರೆ ಹೋಗಿದೆ.

ಕೋಳಿ ಅಂಕಕ್ಕೆ ಕಾನೂನು ನೆಪ ಹೇಳಿ ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಮಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದರು. ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಈಗ 150 ವರ್ಷಗಳ ಇತಿಹಾಸವಿರುವ ಕಂಕನಾಡಿ ಗರೋಡಿ ಜಾತ್ರೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ತಡೆ ನೀಡಲಾಗಿತ್ತು. ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಹಲವು ಬಾರಿ ಆಡಳಿತ ಸಮಿತಿ ಮನವಿ ಮಾಡಿದರು ಪೊಲೀಸರು ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಗರೋಡಿ ಆಡಳಿತ ಸಮಿತಿ ಕೋಟಿ ಚೆನ್ನಯ್ಯ ದೈವಗಳ ಮೊರೆ ಹೋಗಿದೆ.

ಈ ವೇಳೆ ದೈವ, ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ ಎಂದು ಅಭಯ ನೀಡಿದೆ. ದೈವಗಳಿಗೆ ಪ್ರಾರ್ಥನೆ ಬೆನ್ನಲ್ಲೇ ಅಡೆತಡೆಗಳು ನಿವಾರಣೆಯಾಗಿದ್ದು, ಕೋಳಿ ಅಂಕ ಸುಸೂತ್ರವಾಗಿ ನಡೆಸೋದಾಗಿ ದೈವ ನುಡಿದಿದೆ. ಜೂಜು ನಡೆದರೆ ಪೊಲೀಸರು ಕ್ರಮ ಕೈಗೊಳ್ಳಲಿ. ಆದರೆ ಭಕ್ತರ ಧಾರ್ಮಿಕ ಭಾವನೆಗಳಿಗೆ ಪೊಲೀಸರು ಅಡ್ಡಿಪಡಿಸಬಾರದು ಎಂಬುದು ಭಕ್ತರ ಅಭಿಪ್ರಾಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular