ಕೊಪ್ಪಳ : ಪಾರಿವಾಳ ನೋಡುತ್ತಾ ಕಟ್ಟಡದಿಂದ ಆಯತಪ್ಪಿ ಬಿದ್ದ 6 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳದ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಗಾಯಗೊಂಡ ಬಾಲಕನನ್ನ ಹಮಾಲರ ಕಾಲೋನಿಯ ಅಬ್ಬಾಸ್ ಅಲಿ ಅವರ ಮಗ ಅಹ್ಮದ್ ಹ್ಯಾರಿಸ್ (6) ಎಂದು ಗುರುತಿಸಲಾಗಿದೆ.
ಮೊದಲನೇ ಮಹಡಿಯಲ್ಲಿ ಬಾಲಕ ಆಟ ಆಡುತ್ತಿದ್ದನು. ಆಗ ಆತ ಪಾರಿವಾಳವನ್ನು ನ ಹಿಡಿಯಲು ಮುಂದಾಗಿದ್ದು, ಈ ವೇಳೆ ಮಹಡಿಯ ಗ್ರಿಲ್ ಬಳಿ ನಿಂತಿದ್ದಾಗ ಆಕಸ್ಮಾತ್ ಆಗಿ ಕೆಳಗೆ ಬಿದ್ದಿದ್ದಾನೆ . ಕೂಡಲೇ ಪೋಷಕರು ಬಾಲಕನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ ಕಟ್ಟಡದಿಂದ ಕೆಳಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

