ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ.
ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ಬರೋದಿಲ್ಲ. ಜೊತೆಗೆ ಮಕ್ಕಳೂ ಆರೋಗ್ಯವಂತರಾಗ್ತಾರೆ. ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ಬರುವ ಪ್ರಮಾಣ ಶೇಕಡಾ 20 ರಷ್ಟು ಕಡಿಮೆ ಎಂದು ಅಂತರಾಷ್ಟ್ರೀಯ ಸಂಶೋಧನೆ ಹೇಳಿದೆ.
ಇದೊಂದು ಅಪಾಯಕಾರಿ ರೋಗ. 50 ವರ್ಷ ಕೆಳಗಿನ ಮಹಿಳೆಯರು ಈ ರೋಗದಿಂದ ಬಳಲುವುದು ಜಾಸ್ತಿ. ಸ್ತನ್ಯಪಾನ ಮಾಡಿಸದವರ ಜೊತೆಗೆ ಬೊಜ್ಜಿರುವವರಲ್ಲಿಯೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.