ಗಾಜಾ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಹಮಾಸ್ ಕಮಾಂಡರ್ ಬಶರ್ ಥಾಬೆಟ್ ಅವರನ್ನು ಐಡಿಎಫ್ ಕೊಂದಿದ್ದು, 75 ಭಯೋತ್ಪಾದಕ ಗುರಿಗಳ ಮೇಲೆ ದಾಳಿ ಮಾಡಿದೆ.
ಇಸ್ರೇಲ್ ರಕ್ಷಣಾ ಪಡೆಗಳು(ಐಡಿಎಫ್) ಭಾನುವಾರ ಹಮಾಸ್ ಅಭಿವೃದ್ಧಿ ಮತ್ತು ಯೋಜನೆಗಳ ಇಲಾಖೆಯ ಹಿರಿಯ ಕಮಾಂಡರ್ ಬಶರ್ ಥಾಬೆಟ್ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.
ಹಮಾಸ್ ನ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸಂಶೋಧನಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಹೆಸರುವಾಸಿಯಾದ ಥಾಬೆಟ್, ಗಾಜಾದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಗುರಿಯಿಟ್ಟುಕೊಂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಐಡಿಎಫ್ ಪ್ರಕಾರ, ಈ ಕಾರ್ಯಾಚರಣೆಯು ಶಸ್ತ್ರಾಸ್ತ್ರ ತಯಾರಿಕಾ ತಾಣಗಳು ಮತ್ತು ಹಮಾಸ್ ಬಳಸುವ ಸುರಂಗ ಮಾರ್ಗಗಳು ಸೇರಿದಂತೆ ಪ್ರಮುಖ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ.
ಇಸ್ರೇಲಿ ವಾಯುಪಡೆ(ಐಎಎಫ್) ಗಾಜಾದಲ್ಲಿ ಸುಮಾರು 75 ಗುರಿಗಳನ್ನು ಯಶಸ್ವಿಯಾಗಿ ಹೊಡೆದಿದೆ. ಇದರಲ್ಲಿ ಭಯೋತ್ಪಾದಕ ನೆಲೆ ಸೇರಿವೆ. ನಾವು ಹಮಾಸ್ನ ಮಿಲಿಟರಿ ಮೂಲಸೌಕರ್ಯದ ಗಮನಾರ್ಹ ಭಾಗವನ್ನು ಪತ್ತೆಹಚ್ಚಿದ್ದೇವೆ ಮತ್ತು ತಟಸ್ಥಗೊಳಿಸಿದ್ದೇವೆ ಎಂದು ಐಡಿಎಫ್ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕನಿಷ್ಠ 115 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಇಸ್ರೇಲ್ ನ ನಿರಂತರ ದಾಳಿಯಿಂದಾಗಿ ಆಹಾರ, ನೀರು ಮತ್ತು ವೈದ್ಯಕೀಯ ಸರಬರಾಜುಗಳ ತೀವ್ರ ಕೊರತೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ.