HomeLatest NewsBREAKING : 'ಉಪ್ಪಿ-2' ಚಿತ್ರದಲ್ಲಿ ನಟ ಉಪೇಂದ್ರ ಜೊತೆ ನಟಿಸಿದ್ದ 'ಬಾಡಿ ಬಿಲ್ಡರ್' ಅಮೆರಿಕದಲ್ಲಿ ದುರ್ಮರಣ.!

BREAKING : ‘ಉಪ್ಪಿ-2’ ಚಿತ್ರದಲ್ಲಿ ನಟ ಉಪೇಂದ್ರ ಜೊತೆ ನಟಿಸಿದ್ದ ‘ಬಾಡಿ ಬಿಲ್ಡರ್’ ಅಮೆರಿಕದಲ್ಲಿ ದುರ್ಮರಣ.!


ಬೆಂಗಳೂರು : ಉಪ್ಪಿ-2 ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸಿದ್ದ ಬಾಡಿ ಬಿಲ್ಡರ್ ಅಮೆರಿಕದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಹೌದು, ಅಮೆರಿಕಾದಲ್ಲಿ ನಡೆದ ಅಪಘಾತದಲ್ಲಿ ಕೋಲಾರ ಮೂಲದ ಬಾಡಿ ಬಿಲ್ಡರ್ ಸುರೇಶ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸುರೇಶ್ ಮೂಲತಹ ಕೋಲಾರದ ಗಾಂಧಿ ನಗರ ಬಡಾವಣೆಯವರು. ಅವರು ಬಾಡಿ ಬಿಲ್ಡರ್, ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ಅಮೆರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಪ್ಪಿ -2 ಸೇರಿದಂತೆ ಉಪೇಂದ್ರ ಸೇರಿ ಹಲವು ತಾರೆಯರ ಜೊತೆ ಸುರೇಶ್ ನಟಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular