HomeLatest Newsಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ

ಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ

ನವದೆಹಲಿ: ಜಿ.ಎಸ್‌.ಟಿ. ದರ ಇಳಿಕೆ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ವಾಹನಗಳ ದರದಲ್ಲಿ ಭಾರೀ ಇಳಿಕೆ ಮಾಡಿವೆ.

ವಾಹನ ತಯಾರಿಕಾ ಕಂಪನಿಗಳಾದ ಹೀರೋ ಮೋಟೋ ಕಾರ್ಪ್, ರಾಯಲ್ ಎನ್ಫೀಲ್ಡ್, ಯಮಹಾ, ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳು ವಾಹನಗಳ ಬೆಲೆ ಇಳಿಕೆ ಘೋಷಿಸಿದೆ. ಜಿ.ಎಸ್‌.ಟಿ. ದರ ಇಳಿಕೆಯ ಪರಿಣಾಮದಿಂದ ವಾಹನಗಳ ದರದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದ್ದು, ಸೆಪ್ಟಂಬರ್ 22 ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ಜಿ.ಎಸ್‌.ಟಿ. ಕಡಿತ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದು ನಮ್ಮ ಆದ್ಯತೆಯಾಗಿದೆ ಎಂದು ವಾಹನ ತಯಾರಿಕಾ ಕಂಪನಿಗಳು ಹೇಳಿವೆ. ರಾಯಲ್ ಎನ್ಫೀಲ್ಡ್ 350ಸಿಸಿ ಶ್ರೇಣಿಯ ದ್ವಿಚಕ್ರ ವಾಹನ ಬೆಲೆಯನ್ನು 22 ಸಾವಿರ ರೂ.ವರೆಗೆ ಇಳಿಸಿದೆ. ಹೀರೋ ಮೋಟಾರ್ ಕಾರ್ಪ್ ತನ್ನ ಆಯ್ದ ಮಾದರಿಯ ದ್ವಿಚಕ್ರ ವಾಹನಗಳ ದರವನ್ನು 15,743 ರೂ.ವರೆಗೂ ಕಡಿತಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಮಹಾ ಮೋಟರ್ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು 17,581 ರೂಪಾಯಿವರೆಗೆ ಕಡಿಮೆ ಮಾಡಿದೆ. ಫೋಕ್ಸ್ ವ್ಯಾಗನ್ ಇಂಡಿಯಾ ಕಾರುಗಳ ಬೆಲೆಯನ್ನು 3.27 ಲಕ್ಷ ರೂ.ವರೆಗೆ ಕಡಿಮೆ ಮಾಡಲಾಗಿದೆ. ಸ್ಕೋಡಾ ಕಂಪನಿ ತನ್ನ ವಾಹನಗಳ ಬೆಲೆಯನ್ನು 3.3 ಲಕ್ಷ ರೂ.ವರೆಗೂ ಇಳಿಕೆ ಮಾಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular