HomeSpecialಮನೆಯಲ್ಲಿಯೇ ತಯಾರಿಸಬಹುದು ಆ್ಯಪಲ್ ಸೈಡರ್ ವಿನೇಗರ್

ಮನೆಯಲ್ಲಿಯೇ ತಯಾರಿಸಬಹುದು ಆ್ಯಪಲ್ ಸೈಡರ್ ವಿನೇಗರ್

ಆ್ಯಪಲ್ ಸೈಡರ್ ವಿನೇಗರ್ ಉಪಯೋಗ ಬಹಳಷ್ಟು ಇದೆ. ಇದನ್ನು ತ್ವಚೆಯ ಆರೈಕೆಯ ಜತೆಗೆ ಕೆಲವರು ತೂಕ ಇಳಿಕೆ ಮಾಡುವುದಕ್ಕೆ ಕೂಡ ಬಳಸುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಮಾಡುವ ವಿಧಾನ ಇಲ್ಲಿದೆ ನೋಡಿ.

6 –ಸೇಬುಹಣ್ಣುಗಳು, 6 ಚಮಚ-ಬೆಲ್ಲದ ಪುಡಿ, 2 ಲೋಟ ನೀರು.
ಮೊದಲಿಗೆ ಸೇಬು ಹಣ್ಣುಗಳನ್ನು ಚೆನ್ನಾಗಿ ತೊಳೆದು ನೀರಿನ ಪಸೆ ಇರದಂತೆ ಒರೆಸಿಕೊಳ್ಳಿ. ಒಂದು ಗಾಜಿನ ಬಾಟೆಲ್ ತೆಗೆದುಕೊಂಡು ಅದನ್ನು ಕೂಡ ಚೆನ್ನಾಗಿ ತೊಳೆದು ಒರೆಸಿಕೊಂಡಿರಿ. ಸೇಬು ಹಣ್ಣುಗಳನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಂಡು ಗಾಜಿನ ಬಾಟೆಲ್ ಗೆ ಹಾಕಿ. ನಂತರ 6 ಚಮಚ ಬೆಲ್ಲವನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕದಡಿ ಈ ನೀರನ್ನು ಗಾಜಿನ ಬಾಟಲಿಗೆ ಸೇರಿಸಿ. ಸೇಬು ಹಣ್ಣಿನ ಹೋಳುಗಳು ಮುಳುಗವವರೆಗೆ ನೀರು ಹಾಕಿ. ಬಾಟೆಲ್ ನ ಮುಕ್ಕಾಲು ಭಾಗದವರಗೆ ಮಾತ್ರ ನೀರು ಸೇರಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಮರದ ಸೌಟಿನ ಸಹಾಯದಿಂದ ಬಾಟೆಲ್ ನಲ್ಲಿರುವ ಮಿಶ್ರಣವನ್ನು ಚೆನ್ನಾಗಿ ಕದಡಿಸಿ. ನಂತರ ಒಂದು ಶುದ್ಧವಾದ ಮಸ್ಲಿನ್ ಬಟ್ಟೆ ತೆಗೆದುಕೊಂಡು ಅದರಿಂದ ಬಾಟೆಲ್ ನ ಬಾಯಿಯನ್ನು ಮುಚ್ಚಿ ಒಂದು ರಬ್ಬರ್ ಬ್ಯಾಂಡ್ ನ ಸಹಾಯದಿಂದ ಕಟ್ಟಿ. ಯಾವುದೇ ಕಾರಣಕ್ಕೂ ಬಾಟೆಲ್ ಮುಚ್ಚಳ ಮುಚ್ಚಬೇಡಿ.

2 ವಾರಗಳ ಕಾಲ ಈ ಮಿಶ್ರಣ ಹೀಗೇಯೇ ಇರಲಿ. 2 ದಿನಕ್ಕೊಮ್ಮೆ ಬಾಟೆಲ್ ತೆರೆದು ಮರದ ಸೌಟಿನ ಸಹಾಯದಿಂದ ಈ ಮಿಶ್ರಣವನ್ನು ಕದಡುತ್ತಾ ಇರಿ. ಎರಡು ವಾರಗಳ ನಂತರ ಬಾಟೆಲ್ ನಲ್ಲಿರುವ ನೀರನ್ನು ಸೋಸಿಕೊಳ್ಳಿ. ಈ ನೀರನ್ನು ಪುನಃ ಬಾಟೆಲ್ ನಲ್ಲಿಟ್ಟು ಬಟ್ಟೆಯ ಸಹಾಯದಿಂದ ಬಾಟೆಲ್ ನ ಬಾಯಿ ಮುಚ್ಚಿ 1 ವಾರಗಳ ಕಾಲ ಹಾಗೇಯೇ ಬಿಟ್ಟುಬಿಡಿ. ಒಂದು ವಾರದ ನಂತರ ಇದನ್ನು ಬೇರೊಂದು ಬಾಟೆಲ್ ಗೆ ಹಾಕಿಕೊಂಡು ಮುಚ್ಚಳ ಮುಚ್ಚಿ ಉಪಯೊಗಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular