HomeLatest NewsBREAKING: ಪ್ರೇಮಿಗಳ ನಡುವೆ ರೀಲ್ಸ್ ಫೋಟೋಗೆ ಜಗಳ: ತುಮಕೂರಿನಲ್ಲಿ ಮನನೊಂದು ಯುವತಿ ಆತ್ಮಹತ್ಯೆ...

BREAKING: ಪ್ರೇಮಿಗಳ ನಡುವೆ ರೀಲ್ಸ್ ಫೋಟೋಗೆ ಜಗಳ: ತುಮಕೂರಿನಲ್ಲಿ ಮನನೊಂದು ಯುವತಿ ಆತ್ಮಹತ್ಯೆ !

ತುಮಕೂರು: ಪ್ರೇಮಿಗಳ ನಡುವೆ ರೀಲ್ಸ್ ಫೋಟೋಗಾಗಿ ಆರಂಭವಾದ ಕಿರುಕ್ ಯುವತಿ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಚೈತನ್ಯ (22) ಆತ್ಮಹತ್ಯೆಗೆ ಶರಣಾದ ಯುವತಿ. ತುಮಕೂರು ಗ್ರಾಮಾಂತರದ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವತಿ ಹಗಊ ಆಕೆಯ ಪ್ರೇಮಿ ನಡುವೆ ರೀಲ್ಸ್ ಫೋಟೋ ವಿಚಾರವಾಗಿ ಜಗಳವಾಗಿತ್ತು. ಇದರಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular