ಫ್ರಾನ್ಸ್ ನಲ್ಲಿ ಮ್ಯೂಸಿಕ್ ಫೆಸ್ಟ್ ಮೇಲೆ ದುಷ್ಕರ್ಮಿಗಳು ಇಂಜೆಕ್ಷನ್ ಅಟ್ಯಾಕ್ ಮಾಡಿದ್ದು, 145 ಮಂದಿಗೆ ಸಿರಿಂಜ್ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಘಟನೆ ಸಂಬಂಧ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಗೀತ ಉತ್ಸವದ ಸಂದರ್ಭದಲ್ಲಿ 145 ಜನರಿಗೆ ಸಿರಿಂಜ್ಗಳಿಂದ ಚುಚ್ಚಲಾಗಿದ್ದು, ರೆಂಚ್ ಪೊಲೀಸರು ಹನ್ನೆರಡು ಶಂಕಿತರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ ಫ್ರಾನ್ಸ್ನಾದ್ಯಂತ ಲಕ್ಷಾಂತರ ಜನರು ಫೆಟೆ ಡೆ ಲಾ ಮ್ಯೂಸಿಕ್ ನಲ್ಲಿ ಮೈ ಮರೆತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಕಂಡ ಕಂಡವರ ಮೇಲೆ ಸಿರಿಂಜನ್ ದಾಳಿ ನಡೆಸಿದ್ದಾರೆ. ಸಿರಿಂಜನ್ ದಾಳಿಯಿಂದ ಅಸ್ವಸ್ಥಗೊಂಡು ಹಲವರು ಆಸ್ಪತ್ರೆ ಸೇರಿದ್ದಾರೆ. ಹಾಗೂ ಪ್ಯಾರಿಸ್ನಲ್ಲಿ, 15 ವರ್ಷದ ಬಾಲಕಿ ಮತ್ತು 18 ವರ್ಷದ ಪುರುಷ ಸೇರಿದಂತೆ ಮೂವರು ವ್ಯಕ್ತಿಗಳಿಗೆ ಇರಿಯಲಾಗಿದೆ ಪ್ಯಾರಿಸ್ನ ಮೂರು ವಿಭಿನ್ನ ಸ್ಥಳಗಳಲ್ಲಿ ಇರಿತದ ವರದಿಯಾದ ನಂತರ ತನಿಖೆಗಳನ್ನು ತೆರೆಯಲಾಯಿತು ಎಂದು ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.

