HomeLatest NewsSHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಸಾಲ ಕಟ್ಟಿಲ್ಲ ಅಂತ 7 ವರ್ಷದ...

SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಸಾಲ ಕಟ್ಟಿಲ್ಲ ಅಂತ 7 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ ಫೈನಾನ್ಸ್ ಸಿಬ್ಬಂದಿ.!

ಮೈಸೂರು : ರಾಜ್ಯದಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಸಾಲ ಕಟ್ಟಿಲ್ಲ ಅಂತ ಫೈನಾನ್ಸ್ ಸಿಬ್ಬಂದಿ7 ವರ್ಷದ ಹೆಣ್ಣು ಮಗಳನ್ನು ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದೆ.ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೇವಲ 1280 ರೂಪಾಯಿ ಸಾಲ ಕಟ್ಟಿಲ್ಲ ಅಂತಾ 7 ವರ್ಷದ ಹೆಣ್ಣು ಮಗುವನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿಡ್ನ್ಯಾಪ್ ಮಾಡಿದ ಆರೋಪ ಕೇಳಿಬಂದಿದೆ.

ನವೀನ್ ಹಾಗೂ ಪ್ರಮೀಳಾ ಎಂಬುವವರು ಬಜಾಜ್ ಮೈಕ್ರೋ ಫೈನಾನ್ಸ್ನಿಂದ 30 ಸಾವಿರ ರೂಪಾಯಿ ಸಾಲ ಮಾಡಿದ್ದರು. 30 ಸಾವಿರ ಸಾಲ ಪಡೆದಿದ್ದ ದಂಪತಿ, 13 ತಿಂಗಳು ಲೋನ್ ಕಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋನ್ ಕಂತು ಕಟ್ಟಲು ತಡವಾಗಿದ್ದಕ್ಕೆ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಮೊದಲಿಗೆ ಮನೆಗೆ ಬಂದಿದ್ದ ಫೈನಾನ್ಸ್ ಸಿಬ್ಬಂದಿ ನವೀನ್ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. . ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು, ದಂಪತಿ ಫೈನಾನ್ಸ್ ಸಿಬ್ಬಂದಿಗೆ ಕಚೇರಿಗೆ ಓಡಿ ಬಂದಿದ್ದಾರೆ. ಆಗ ಸಂಜೆ ದುಡ್ಡು ಕೊಡ್ತೀವಿ, ಮಗಳನ್ನು ಬಿಡಿ ಎಂದು ಕೇಳಿದ್ದಾರೆ. ಆದರೆ ಇದಕ್ಕೆ ಸಿಬ್ಬಂದಿ ಒಪ್ಪಲಿಲ್ಲ. ನಂತರ ಹಣವನ್ನು ನೀಡಿ, ಹೆಣ್ಣು ಮಗುವನ್ನು ಬಿಡಿಸಿಕೊಂಡು ಬಂದಿದ್ದಾರೆ. ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಘಟನೆ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular