HomeLatest News*ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬದ ಸಮೇತ 50 ಅಡಿ ಎಳೆದೊಯ್ದ ಕಾರು*

*ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬದ ಸಮೇತ 50 ಅಡಿ ಎಳೆದೊಯ್ದ ಕಾರು*

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬದ ಸಮೇತ ಕಾರು 50 ಅಡಿಗಳಷ್ಟು ದೂರಕ್ಕೆ ಎಳೆದೊಯ್ದ ಘಟನೆ ಚಿಕ್ಕಮಗಲುರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ವಸ್ತಾರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಕಿತ್ತು ಕಾರಿನ ಮೇಲೆ ಮುರಿದು ಬಿದ್ದಿದೆ. ಕಾರು ಅತಿ ವೇಕದಲ್ಲಿದ್ದ ಪರಿಣಾಮ ವಿದ್ಯುತ್ ಕಂಬದ ಸಮೇತ ಕಾರು 50 ಅಡಿಗಳಷ್ಟು ದೂರ ಎಳೆದೊಯ್ದಿದೆ.

ವಿದ್ಯುಕ್ ಕಂಬಕ್ಕೆ ಹಾಕಿದ್ದ ಗ್ರೌಂಡಿಂಗ್ ವೈರ್ ಕೂಡ ಕಿತ್ತು ಬಿಂದಿದೆ. ಅದೃಷ್ಟವಶಾತ್ ಚಾಲಕ ಪ್ರಾಅಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸದ್ಯ ಚಾಲಕ ಬಚಾವ್ ಆಗಿದ್ದಾನೆ. ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular