alex Certify ಶಿಶ್ನ ಮುರಿತಕ್ಕೆ ಕಾರಣವಾಗುತ್ತೆ ಸೆಕ್ಸ್ ನ ಈ ಭಂಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಶ್ನ ಮುರಿತಕ್ಕೆ ಕಾರಣವಾಗುತ್ತೆ ಸೆಕ್ಸ್ ನ ಈ ಭಂಗಿ

ಭಾರತದಂತ ದೇಶದಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಬದಲಾಗುತ್ತಿರುವ ಕಾಲದಲ್ಲಿ ಈ ಬಗ್ಗೆ ಶಿಕ್ಷಣ ಬೇಕೆಂಬ ಕೂಗು ಹೆಚ್ಚಾಗಿದೆ. ಶಾರೀರಿಕ ಸಂಬಂಧಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ತಿಳಿದುಕೊಂಡಲ್ಲಿ ಹಾಸಿಗೆಯಲ್ಲಿ ಸುಖಕರ ಅನುಭವ ಪಡೆಯಬಹುದಾಗಿದೆ.

ಶಾರೀರಿಕ ಸಂಬಂಧದ ನಂತ್ರ ಬಹುತೇಕ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗೆ ಪುರುಷರಲ್ಲಿಯೂ ಕೆಲ ಸಮಸ್ಯೆಗಳು ಕಾಡುತ್ತವೆ. ಇದ್ರಲ್ಲಿ ಶಿಶ್ನ ಮುರಿತ ಕೂಡ ಒಂದು. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಮಾಡುವ ತಪ್ಪುಗಳು ಹಾಗೂ ಕೆಲ ಭಂಗಿ ಶಿಶ್ನ ಮುರಿತಕ್ಕೆ ಕಾರಣವಾಗುತ್ತದೆ.

ಈ ಭಂಗಿ ಬಹಳ ಅಪಾಯಕಾರಿ ಎಂಬುದು ತಿಳಿದು ಬಂದಿದೆ. 18-66 ವರ್ಷದ ಬಹಳಷ್ಟು ಪುರುಷರು ಶಿಶ್ನ ಮುರಿತಕ್ಕೊಳಗಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅದ್ರಲ್ಲಿ ಶೇಕಡಾ 77ರಷ್ಟು ಮಂದಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಶಿಶ್ನ ಮುರಿತಕ್ಕೊಳಗಾಗಿದ್ದಾರಂತೆ.

ಡಾಗಿ ಸ್ಟೈಲ್ ನ ಭಂಗಿ ಅಪಾಯಕಾರಿ ಎಂದು ಸಂಶೋಧಕರು ಹೇಳಿದ್ದಾರೆ. ಶೇಕಡಾ 41ರಷ್ಟು ಪುರುಷರು ಡಾಗಿ ಸ್ಟೈಲ್ ಭಂಗಿಯಲ್ಲಿ ಶಿಶ್ನ ಮುರಿತಕ್ಕೊಳಗಾಗಿದ್ದಾರಂತೆ.

ಎರಡನೇ ಅಪಾಯಕಾರಿ ಭಂಗಿ ಮಶಿನರಿ. ಇದ್ರಲ್ಲಿ ಪುರುಷ ಮೇಲಿರುತ್ತಾನೆ. ಇನ್ನೊಂದು ಮಹಿಳೆ ಮೇಲಿರುವ ಭಂಗಿಯಲ್ಲಿ ಶಿಶ್ನ ಮುರಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...