HomeLatest NewsBIG NEWS: ಹಿಂದೂ ಮುಖಂಡರಿಗೆ ನೋಟಿಸ್ ವಿಚಾರ: ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆ ಇದು:...

BIG NEWS: ಹಿಂದೂ ಮುಖಂಡರಿಗೆ ನೋಟಿಸ್ ವಿಚಾರ: ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆ ಇದು: ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮುಖಂಡರಿಗೆ ನೋಟಿಸ್ ಕೊಟ್ಟಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಅರುಣ್ ಕುಮಾರ್ ಪುತ್ತಿಲ ಅವರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆಯಿದು ಎಂದು ಕಿಡಿಕಾರಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆಯಾಗದಿದ್ದರೆ ಈ ಸರಣಿ ಹತ್ಯೆ ನಡೆಯುತ್ತಿದ್ವಾ? ಆಗ ಆರೋಪಿಗಳಿಗೆ ಸರಿಯಾದ ಪಾಠ ಕಲಿಸಿದ್ದರೆ ಈ ಹತ್ಯೆ ಆಗುತ್ತಿರಲಿಲ್ಲ. ಪಿಎಫ್ ಐ, ಕೆ ಎಫ್ ಡಿ ಸಂಘಟನೆಗಳನ್ನು ಮಟ್ಟ ಹಾಕುವುದನ್ನು ಬಿಟ್ಟು ಹಿಂದೂ ನಾಯಕರಿಗೆ ನೋಟಿಸ್ ಕೊಟ್ಟಿರುವುದು ಎಷ್ಟು ಸರಿ? ಹಿಂದೂಗಳ ಧ್ವನಿ ಅಡಗಿಸಲು ಮಾಡಿರುವ ಕೆಲಸವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular