HomeLatest Newsಶ್ರೇಯಸ್ ಅಯ್ಯರ್ ಅಬ್ಬರ: ಅಂತಿಮ ಹಣಾಹಣಿಗೆ ಪಿಬಿಕೆಎಸ್‌ ಲಗ್ಗೆ ! ಪ್ರೀತಿ ಜಿಂಟಾ ಸಂಭ್ರಮ |...

ಶ್ರೇಯಸ್ ಅಯ್ಯರ್ ಅಬ್ಬರ: ಅಂತಿಮ ಹಣಾಹಣಿಗೆ ಪಿಬಿಕೆಎಸ್‌ ಲಗ್ಗೆ ! ಪ್ರೀತಿ ಜಿಂಟಾ ಸಂಭ್ರಮ | Watch

ಶ್ರೇಯಸ್ ಅಯ್ಯರ್ ಅವರ ಅಜೇಯ 87 ರನ್‌ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ (PBKS) ತಂಡವು ಮುಂಬೈ ಇಂಡಿಯನ್ಸ್ (MI) ಅನ್ನು ಮಣಿಸಿ ಐಪಿಎಲ್ 2025 ರ ಫೈನಲ್‌ಗೆ ಪ್ರವೇಶಿಸಿದೆ. ಈ ಐತಿಹಾಸಿಕ ಗೆಲುವಿನ ನಂತರ ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರು ಭಾವುಕರಾಗಿ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಸಂಭ್ರಮಿಸಿದ್ದಾರೆ.

ಗೆಲುವಿನ ರನ್ ಬಾರಿಸಿದ ತಕ್ಷಣ ಐಪಿಎಲ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಪ್ರೀತಿ ಜಿಂಟಾ ಅವರು ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಮೊದಲು ಸ್ಟ್ಯಾಂಡ್‌ನಲ್ಲಿ ಪಂಜಾಬ್ ಬೆಂಬಲಿಗರೊಂದಿಗೆ ಸಂಭ್ರಮಿಸಿದ ಅವರು, ನಂತರ ಮೈದಾನಕ್ಕೆ ತೆರಳಿ ನಾಯಕ ಶ್ರೇಯಸ್ ಅಯ್ಯರ್ ಪ್ರೀತಿ ಜಿಂಟಾ ಶ್ರೇಯಸ್ಅಯ್ಯರ್ ಮತ್ತು ಕೋಚ್ ರಿಕಿ ಪಾಂಟಿಂಗ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು. ಅಲ್ಲದೆ, 48 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದ ನೆಹಾಲ್ ವಾದೇರಾ ಅವರನ್ನೂ ಪ್ರೀತಿ ಜಿಂಟಾ ಅಭಿನಂದಿಸಿದರು.

ಪಿಬಿಕೆಎಸ್ vs ಎಂಐ ಪಂದ್ಯ ನಡೆದಿದ್ದು ಹೇಗೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಕ್ವಾಲಿಫೈಯರ್ 2 ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮುಂಬೈ ಇಂಡಿಯನ್ಸ್ ಅನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಜಾನಿ ಬೈರ್‌ಸ್ಟೋವ್ ಮತ್ತು ತಿಲಕ್ ವರ್ಮಾ ಉತ್ತಮ ಆರಂಭ ನೀಡಿದರೆ, ಸೂರ್ಯಕುಮಾರ್ ಯಾದವ್ ಅವರ 44 ರನ್ ಇನ್ನಿಂಗ್ಸ್‌ಗೆ ವೇಗ ನೀಡಿತು. ಕೊನೆಯಲ್ಲಿ, ನಾಮನ್ ಧೀರ್ ಅವರ ಸ್ಪೋಟಕ ಆಟದ ನೆರವಿನಿಂದ ಮುಂಬೈ 20 ಓವರ್‌ಗಳಲ್ಲಿ 203 ರನ್ ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್, ಆರಂಭದಲ್ಲಿ ಪ್ರಭ್‌ಸಿಮ್ರನ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಆದರೆ, ಜೋಶ್ ಇಂಗ್ಲಿಸ್ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿ, ಜಾಸ್ಪ್ರಿತ್ ಬುಮ್ರಾ ಅವರ ಮೊದಲ ಓವರ್‌ನಲ್ಲಿ 20 ರನ್ ಚಚ್ಚಿದರು. ಇಂಗ್ಲಿಸ್ ಮತ್ತು ಪ್ರಿಯಾಂಶು ಬೇಗನೆ ಔಟಾದರೂ, ನಂತರ ನಾಯಕ ಶಿರೇಯಸ್ ಅಯ್ಯರ್ ಅವರು ವಾದೇರಾ ಅವರೊಂದಿಗೆ ಸೇರಿಕೊಂಡು ನಾಯಕನ ಆಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕಪ್‌ಗಾಗಿ ಸೆಣಸಾಡಲಿದೆ. ವಿಜೇತ ರನ್‌ಗಳನ್ನು ಶಿರೇಯಸ್ ಅವರೇ ಬಾರಿಸಿದ್ದು, ಈ ಗೆಲುವು ಇನ್ನಷ್ಟು ಸಿಹಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular