ಶಾರೀರಿಕ ಸಂಬಂಧ ಅನ್ನೋದು ಬದುಕಿನ ಅವಿಭಾಜ್ಯ ಅಂಗ. ಜೀವನದಲ್ಲಿ ದಂಪತಿಗೆ ಹೊಸ ಉಲ್ಲಾಸ ಮೂಡಿಸುವ ಸಂಬಂಧ ಅದು. ಶಾರೀರಿಕ ಸಂಬಂಧಕ್ಕೆ ಸ್ಥಳ ಮತ್ತು ಸಮಯದ ಪರಿವೆ ಇಲ್ಲ. ಅಚ್ಚರಿಯ ಸಂಗತಿ ಅಂದ್ರೆ ಪುರುಷರು ಹೆಚ್ಚಾಗಿ ಬೆಳಗಿನ ಸಮಯದಲ್ಲಿ ಪತ್ನಿಯನ್ನು ಸೇರಲು ಬಯಸುತ್ತಾರಂತೆ. ಇದಕ್ಕೆ ಕಾರಣ ಕೂಡ ಇದೆ.
ಶಾರೀರಿಕ ಸಂಬಂಧ ಬೆಳೆಸಲು ಬೆಳಗ್ಗೆ ಸೂಕ್ತ ಸಮಯ ಅನ್ನೋದು ಅನೇಕ ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಇದರಿಂದ ಮಹಿಳೆ ಹಾಗೂ ಪುರುಷ ಇಬ್ಬರ ಮೂಡ್ ಕೂಡ ದಿನವಿಡೀ ಚೆನ್ನಾಗಿರುತ್ತದೆ. ಪುರುಷರು ತಮ್ಮ ಕೆಲಸದ ಬಗ್ಗೆ ಅತ್ಯಂತ ಉತ್ಸಾಹಭರಿತರಾಗಿರುತ್ತಾರೆ. ಅದರಲ್ಲೂ ಬೆಳಗಿನ ಜಾವ ಈ ಉತ್ಸಾಹ ಹೆಚ್ಚಾಗಿರುತ್ತದೆ.
ಮಹಿಳೆಯರಿಗೆ ಪ್ರತಿ ತಿಂಗಳಿಗೊಮ್ಮೆ ಹಾರ್ಮೋನ್ ಬದಲಾವಣೆಯಾಗುತ್ತದೆ. ಆದ್ರೆ ಈ ಅನುಭವ ಪುರುಷರಿಗೆ ಪ್ರತಿನಿತ್ಯ ಆಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಆದ್ರೆ ಈ ಉತ್ಸಾಹ ಬೆಳಗಿನ ಸಮಯದಲ್ಲಿ ಹೆಚ್ಚಾಗಿರುತ್ತದೆಯಂತೆ, ಮಧ್ಯಾಹ್ನವಾಗುತ್ತಿದ್ದಂತೆ ಅದು ಕಡಿಮೆಯಾಗುತ್ತಾ ಹೋಗುತ್ತದೆ. ರಾತ್ರಿಯಾಗುವಷ್ಟರಲ್ಲಿ ಅತ್ಯಂತ ಕಾಳಜಿಯುಳ್ಳವರಾಗಿ, ಪೋಷಕರಾಗಿ ಬದಲಾಗುತ್ತಾರಂತೆ. ಪುರುಷರಲ್ಲಿರುವ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನು ಕೂಡ ಬೆಳಗಿನ ಮೂಡ್ ಸ್ವಿಂಗ್ ಗೆ ಕಾರಣ.