ಆರ್ಥಿಕ ವೃದ್ಧಿಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ನಾವು ಮಾಡುವ ಕೆಲವೊಂದು ಕೆಲಸಗಳು ನಮಗೆ ತಿಳಿಯದೆ ಸಮಸ್ಯೆ ತಂದೊಡ್ಡುತ್ತವೆ. ವಾಸ್ತು ಶಾಸ್ತ್ರ ತಿಳಿಯದ ವ್ಯಕ್ತಿಗಳಿಗೆ ನಾವು ಮಾಡುವ ಈ ಕೆಲಸಗಳು ವಾಸ್ತು ದೋಷಕ್ಕೆ ಕಾರಣವಾಗುತ್ತೆ ಎಂಬ ಅರಿವಿರುವುದಿಲ್ಲ. ಹಗಲು-ರಾತ್ರಿ ದುಡಿದ್ರೂ ಹಣ ಸಾಲಲ್ಲ ಎಂಬ ಕೊರಗು ಮಾತ್ರ ಕಾಡುತ್ತಿರುತ್ತದೆ.
ಮನೆ ಎಂದ ಮೇಲೆ ಪೊರಕೆ ಇದ್ದೆ ಇರುತ್ತೆ. ಎಲ್ಲೆಂದರಲ್ಲಿ ಪೊರಕೆ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಸೂಕ್ತವಲ್ಲ. ಕಪಾಟಿನ ಹಿಂದೆ ಅಥವಾ ಬೆಲೆ ಬಾಳುವ ವಸ್ತುಗಳ ಹಿಂದೆ ಅಥವಾ ಪಕ್ಕದಲ್ಲಿ ಪೊರಕೆಯನ್ನಿಡಬಾರದು.
ಅನೇಕರು ಅಡುಗೆ ಮನೆಯಲ್ಲಿ ಮಾತ್ರೆಗಳನ್ನಿಡುತ್ತಾರೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾತ್ರೆಗಳನ್ನಿಡುವುದು ಶುಭವಲ್ಲ. ಇದು ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಲು ಕಾರಣವಾಗುತ್ತದೆ.
ಶೌಚಾಲಯ ಹಾಗೂ ಸ್ನಾನಗೃಹದ ಬಾಗಿಲನ್ನು ಅನವಶ್ಯಕವಾಗಿ ತೆರೆದಿಡಬೇಡಿ. ಇದು ಹಣ ಖರ್ಚಾಗಲು ಮುನ್ನುಡಿ ಬರೆಯುತ್ತದೆ.
ಮನೆಯ ಗೋಡೆ ಅಥವಾ ಖುರ್ಚಿ ಮೇಲೆ ಪೆನ್ಸಿಲ್, ಪೆನ್ ಹಾಗೂ ಚಾಕ್ಪೀಸ್ ನಿಂದ ಯಾವುದೇ ಚಿತ್ರ ಬಿಡಿಸದಂತೆ ನೋಡಿಕೊಳ್ಳಿ. ಖರ್ಚು ಹೆಚ್ಚಾಗುವ ಜೊತೆಗೆ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮನೆ ಅಥವಾ ಅಂಗಡಿಯ ಉತ್ತರ-ಪೂರ್ವ ದಿಕ್ಕಿನಲ್ಲಿ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ಭಗವಂತ ವಿಷ್ಣು ಹಾಗೂ ದೇವಿ ಲಕ್ಷ್ಮಿ ಮುನಿಸಿಕೊಳ್ತಾರೆ.
ಬೆಡ್ ರೂಂನಲ್ಲಿ ದೇವರ ಮೂರ್ತಿಯಿಟ್ಟು ಪೂಜೆ ಮಾಡಬೇಡಿ. ಇದು ಅಶಾಂತಿ, ಆರ್ಥಿಕ ದುಃಸ್ಥಿತಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.
ಮನೆಯಲ್ಲಿ ಮುಳ್ಳಿನ, ಹಾಲು ಬರುವಂತಹ ವಿಷದ ಗಿಡವನ್ನು ನೆಡಬಾರದು. ಇದು ಧನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.