ಮನೆಯ ಅಶಾಂತಿ ಹಾಗೂ ನೋವಿಗೆ ಪಿತೃ ದೋಷವೂ ಒಂದು ಕಾರಣ. ಪಿತೃ ಪಕ್ಷದಲ್ಲಿ ಸಾಮಾನ್ಯವಾಗಿ ಪಿತೃಗಳ ಆತ್ಮದ ಶಾಂತಿಗೆ ಶ್ರಾದ್ಧವನ್ನು ಮಾಡಲಾಗುತ್ತದೆ. ಶ್ರಾದ್ಧ ಮಾಡಿದ್ರೆ ಪೂರ್ವಜರು ಖುಷಿಯಾಗಿ ಆಶೀರ್ವಾದ ಮಾಡ್ತಾರೆನ್ನುವ ನಂಬಿಕೆಯಿದೆ.
ಕೆಲವರಿಗೆ ನಿಯಮ ಬದ್ಧವಾಗಿ ಶ್ರಾದ್ಧ ಮಾಡಲು ಸಾಧ್ಯವಿಲ್ಲ. ಅಂಥವರು ಪಿತೃ ಪಕ್ಷದಲ್ಲಿ ಕೆಲವೊಂದು ಉಪಾಯಗಳನ್ನು ಅನುಸರಿಸಿ ಮನೆಯಲ್ಲಿ ಸದಾ ಶಾಂತಿ ನೆಲೆಸುವಂತೆ ಮಾಡಬಹುದು.
ಪ್ರತಿ ದಿನ ಮನೆಯಲ್ಲಿ ಹಿರಿಯರ ಹೆಸರಿನಲ್ಲಿ ಧೂಪ ಬೆಳಗಿ. ಪಿತೃ ಪಕ್ಷ ಮುಗಿಯುವವರೆಗೂ ಪ್ರತಿದಿನ ಈ ಕೆಲಸ ಮಾಡುತ್ತ ಬನ್ನಿ.
ಮನೆಯಲ್ಲಿ ಮಾಡುವ ಮೊದಲ ರೊಟ್ಟಿಯನ್ನು ಗೋವಿಗೆ ನೀಡಿ. ಹಾಗೆ ಕೊನೆಯ ರೊಟ್ಟಿಯನ್ನು ನಾಯಿಗೆ ನೀಡಿ. ಹೀಗೆ ಮಾಡಿದ್ರೆ ಹಿರಿಯರ ಆತ್ಮಗಳು ಸಂತೃಪ್ತಿಗೊಳ್ಳುತ್ತವೆ.
ಪಿತೃ ಪಕ್ಷದಲ್ಲಿ ಕಪ್ಪು ಬಟ್ಟೆಯನ್ನು ಬಡವರಿಗೆ ದಾನವಾಗಿ ನೀಡುವುದು ಒಳ್ಳೆಯದು.
ಈ ಪಕ್ಷದಲ್ಲಿ ಯಾವುದಾದ್ರೂ ಗೋ ಶಾಲೆಗೆ ಹೋಗಿ ಗೋವಿಗೆ ಹಸಿರು ಹುಲ್ಲನ್ನು ನೀಡಿ.
ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೀರು ಹಾಗೂ ಕಪ್ಪು ಎಳ್ಳನ್ನು ಅಭಿಷೇಕ ಮಾಡುವುದು ಶುಭಕರ. ಶುಭಕರ
ಹಾಗೆ ಪಿತೃಪಕ್ಷದಲ್ಲಿ ಕೆಲವರು ಹೊಸ ಕೆಲಸ ಶುರುಮಾಡಲು ಬಯಸುತ್ತಾರೆ. ಅಂತವರಿಗೆ ಪೂರ್ವಜರು ಶುಭ ಸಂದೇಶ ನೀಡ್ತಾರೆ. ಸ್ವಪ್ನದಲ್ಲಿ ಪೂರ್ವಜರು ಖುಷಿಯಾಗಿರುವಂತೆ ಕಂಡಲ್ಲಿ ಪಿತೃಪಕ್ಷ ನಿಮಗೆ ಶುಭಕರ ಎಂದರ್ಥ.
ಕನಸಿನಲ್ಲಿ ಹಾವು ನಿಮ್ಮನ್ನು ರಕ್ಷಿಸುವಂತೆ ಕಂಡರೂ ಅದು ಶುಭ ಸಂಕೇತವಾಗಿದೆ.