ಪ್ರತಿದಿನ 3 ರಿಂದ 5 ಲೀಟರ್ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ ಕೂಡ ನೀರನ್ನು ಕುಡಿಯಿರಿ.
ಈ ದಿನಗಳಲ್ಲಿ ದೇಹದಿಂದ ಹೆಚ್ಚಿನ ಬೆವರು ಬರುತ್ತದೆ. ಇದರಿಂದ ಶರೀರದಿಂದ ನೀರು ಮತ್ತು ಖನಿಜ ಹೊರ ಹೋಗುತ್ತದೆ. ಇದನ್ನು ನಿಯಂತ್ರಿಸಲು ನೀರು, ಎಳನೀರು, ಕಬ್ಬಿನ ಹಾಲು, ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಿರಿ.
ಥಟ್ಟಂತ ಮಾಡಿಬಿಡಿ ಬಾಳೆಹಣ್ಣಿನ ‘ರಸಾಯನ’
ಇದರ ಜೊತೆಗೆ ನಿಂಬೆ ಹಣ್ಣಿನ ರಸದೊಂದಿಗೆ ಸಕ್ಕರೆ ಬೆರೆಸಿ ಕುಡಿಯಿರಿ. ಇದರಿಂದ ಶರೀರದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ. ಅದಷ್ಟು ಬಿರು ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಿ.