ಹೊಸ ಜೀವನ ಆರಂಭಿಸುವ ಮೊದಲು ಹುಡುಗ – ಹುಡುಗಿ ಇಬ್ಬರಿಗೂ ಸಾಕಷ್ಟು ಕುತೂಹಲಗಳಿರುತ್ತವೆ. ಸಂಗಾತಿಯನ್ನು ಖುಷಿಯಾಗಿರಿಸೋದು ಹೇಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಬೆಡ್ ರೂಂನಲ್ಲಿ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಸುಖಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.
ಸ್ವಚ್ಛತೆ : ಸ್ವಚ್ಛತೆ ದಾಂಪತ್ಯದಲ್ಲಿ ಬಹಳ ಮುಖ್ಯ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನೈರ್ಮಲ್ಯದ ಬಗ್ಗೆ ಗಮನ ನೀಡಿ.
ಸುಗಂಧ ದ್ರವ್ಯ : ಬೆಡ್ ರೂಂ ಬಾಗಿಲು ತೆರೆಯುತ್ತಿದ್ದಂತೆ ಒಳ್ಳೆ ಸುವಾಸನೆ ಬಂದ್ರೆ ಎಲ್ಲರ ಮೂಡ್ ಬದಲಾಗುತ್ತದೆ. ಎಷ್ಟೇ ಕೋಪ, ನೋವಿದ್ದರೂ ಮನಸ್ಸು ಖುಷಿಯಾಗಿ ಹಿತವೆನಿಸುತ್ತದೆ. ಹಾಗಾಗಿ ಬೆಡ್ ರೂಮ್ ವಾಸನೆ ಬಗ್ಗೆ ಲಕ್ಷ್ಯವಿರಲಿ. ಬೆಡ್ ರೂಂಗೆ ಸುಗಂಧ ದ್ರವ್ಯವನ್ನು ಸಿಂಪಡಿಸಿ.
ಪಾನೀಯ : ಸುಖಕರ ಕ್ಷಣವನ್ನು ಮತ್ತಷ್ಟು ಸುಂದರಗೊಳಿಸುತ್ತೆ ಡ್ರಿಂಕ್. ನಿಮ್ಮ ಸಂಗಾತಿಗಿಷ್ಟವಾಗುವ ಡ್ರಿಂಕ್ ತರೋದನ್ನು ಮರೆಯದಿರಿ.
ಸರ್ಪ್ರೈಸ್ : ಸರ್ಪ್ರೈಸ್ ಹುಡುಗ-ಹುಡುಗಿ ಇಬ್ಬರಿಗೂ ಇಷ್ಟವಾಗುತ್ತೆ. ಹಾಗಾಗಿ ಸಂಗಾತಿಗೆ ತಿಳಿಯದಂತೆ ಅವರಿಗಿಷ್ಟವಾಗುವ ಸರ್ಪ್ರೈಸ್ ಕೊಡಿ.
ಕೋಣೆಯ ಅಲಂಕಾರ : ಬೆಡ್ ರೂಂ ಅಸ್ತವ್ಯಸ್ತವಾಗಿದ್ದರೆ ಮೂಡ್ ಕೂಡ ಅಸ್ತವ್ಯಸ್ತವಾಗುತ್ತೆ. ಹಾಗಾಗಿ ಕೋಣೆಯ ಬಣ್ಣದಿಂದ ಹಿಡಿದು ಬೆಡ್ ಎಲ್ಲವನ್ನು ಇಬ್ಬರಿಗೂ ಇಷ್ಟವಾಗುವಂತೆ ಜೋಡಿಸಿ.