ಒಳ್ಳೆಯ ಹಾಗೂ ಖುಷಿಯ ಜೀವನಕ್ಕಾಗಿ ಜನರು ಎಷ್ಟೆಲ್ಲ ಕಷ್ಟಪಡ್ತಾರೆ. ಆದ್ರೂ ಅವರ ಹಾಗೂ ಅವರ ಕುಟುಂಬದವರ ಬೆನ್ನು ಬಿಡುವುದಿಲ್ಲ ಕಷ್ಟ. ಇದಕ್ಕೆ ವಾಸ್ತು ದೋಷ ಕೂಡ ಒಂದು ಕಾರಣವಾಗಿರಬಹುದು. ವ್ಯಕ್ತಿ ಮಾಡುವ ಕೆಲವೊಂದು ಕೆಲಸಗಳಿಂದ ನಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಮನೆಯಲ್ಲಿ ಸಂತೋಷದ ಬದಲು ದುಃಖ ನೆಲೆಸಲು ಕಾರಣವಾಗುತ್ತದೆ.
ಅನೇಕ ಜನರು ರಾತ್ರಿ ಊಟದ ಜೊತೆ ಮೊಸರು, ತುಪ್ಪ, ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತ್ರ ಈ ವಸ್ತುಗಳನ್ನು ಸೇವಿಸಬಾರದು. ಹಾಗೆ ಈ ವಸ್ತುಗಳನ್ನು ಯಾರಿಗೂ ನೀಡಬಾರದು. ಇದ್ರಿಂದ ಮನೆಯ ಖುಷಿ ದೂರ ಓಡಿ ಹೋಗುತ್ತದೆ.
ತಿಂಗಳಲ್ಲಿ ಒಂದು ಬಾರಿ ಜೇನುತುಪ್ಪ ಹಾಕಿ ಖೀರ್ ಸಿದ್ಧಪಡಿಸಿ. ಇದ್ರಿಂದ ಕುಟುಂಬಸ್ಥರಲ್ಲಿ ಪ್ರೇಮ ಹೆಚ್ಚಾಗುತ್ತದೆ. ಈ ಖೀರನ್ನು ಕುಟುಂಬಸ್ಥರು ಒಂದಾಗಿ ಕುಳಿತು ಸೇವನೆ ಮಾಡಬೇಕು. ಹಾಗಾದಲ್ಲಿ ಪ್ರೇಮ ಹೆಚ್ಚಾಗುವ ಜೊತೆಗೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.
ಹಣ್ಣುಗಳನ್ನು ತಿಂದ ನಂತ್ರ ಅದ್ರ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಹಾಕ್ತಾರೆ. ಆದ್ರೆ ಸಿಪ್ಪೆಯನ್ನು ಹೊರಗೆ ಎಸೆಯಬೇಕು. ದನ ಅಥವಾ ಪ್ರಾಣಿಗಳಿಗೆ ನೀಡಿದ್ರೆ ತಕ್ಷಣ ಫಲ ಸಿಗುತ್ತದೆ.