
ಬೆಂಗಳೂರು: ವಿಧಾನಸೌಧ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಸಂಜಯ್ ಎಂಬ ಯುವಕನನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ಲಾಸ್ಟಿಕ್ ಕವರ್ ನಲ್ಲಿ ವಿಷ ಮತ್ತು ಕೆಲವು ದಾಖಲೆಗಳನ್ನು ತಂದಿದ್ದ ಸಂಜಯ್ ಚನ್ನಪಟ್ಟಣ ಠಾಣೆ ಪೋಲೀಸರು ನನಗೆ ಹೊಡೆದಿದ್ದಾರೆ. ನನಗೆ ನ್ಯಾಯ ಬೇಕೆಂದು ವಿಷ ಸೇವಿಸಲು ಮುಂದಾಗಿದ್ದ. ಮಫ್ತಿಯಲ್ಲಿದ್ದ ಪೊಲೀಸರು ಸಂಜಯ್ ನನ್ನು ಎಳೆದುಕೊಂಡು ಹೋಗಿದ್ದಾರೆ. ಆತ ವಿಷ ಸೇವಿಸಿದ್ದೇನೆ ಎಂದು ಹುಚ್ಚಾಟವಾಡುತ್ತಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಕುರಿತಾಗಿ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.