
ನವದೆಹಲಿ: ಮಂಗಳವಾರ ಒಂದೇ ದಿನ 10 ಗ್ರಾಂ ಚಿನ್ನದ ಎರಡು ಸಾವಿರ ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 94,000 ರೂ., ಬೆಂಗಳೂರಿನಲ್ಲಿ 95,000 ರೂ.ಗೆ ತಲುಪಿ ಹೊಸ ದಾಖಲೆ ಬರೆದಿದೆ ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಏರಿಕೆಯಾಗಿದ್ದು, 1,05,500 ರೂ.ಗೆ ತಲುಪಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಪರಿಶುದ್ಧ ಚಿನ್ನದ ಗಟ್ಟಿಯ ದರ 95,890 ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 94,150 ರೂಪಾಯಿಗೆ ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ, ದೇಶಿಯ ಮಾರುಕಟ್ಟೆಯಲ್ಲಿ ಆಭರಣ ವರ್ತಕರಿಂದ ಹೆಚ್ಚಿನ ಖರೀದಿ, ಷೇರು ಮಾರುಕಟ್ಟೆಗಳ ಕುಸಿತ ಹಿನ್ನೆಲೆ ಚಿನ್ನದ ದರ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಗಟ್ಟಿ ದರ 95,890 ರೂಪಾಯಿಗೆ ತಲುಪಿದೆ. ಆಭರಣ ಮಳಿಗೆಗಳಲ್ಲಿ ಜಿಎಸ್‌ಟಿ ಹೊರತುಪಡಿಸಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ ಸರಾಸರಿ 9285 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನದ ದರ 8510 ರೂ. ಇದೆ.
ದೆಹಲಿಯಲ್ಲಿ ಆಭರಣ ಚಿನ್ನದ ದರ ಒಂದೇ ದಿನ 10 ಗ್ರಾಂ ಗೆ 2 ಸಾವಿರ ರೂಪಾಯಿ ಏರಿಕೆಯಾಗಿದ್ದು, 93,700 ರೂ. ಗೆ ತಲುಪಿದೆ. 99.9 ರಷ್ಟು ಶುದ್ಧತೆಯ ಗಟ್ಟಿ ಚಿನ್ನ 10 ಗ್ರಾಂ ಗೆ 2,000 ರೂ.ಏರಿಕೆಯಾಗಿ 94,150 ರೂಪಾಯಿಗೆ ತಲುಪಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ ಶೇಕಡ 35ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ 68,000 ರೂ.ಇದ್ದ ಚಿನ್ನದ ದರ ಈಗ 95,000 ರೂ.ಗೆ ತಲುಪಿದ್ದು, 27 ಸಾವಿರ ರೂಪಾಯಿ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಕೆಜಿ ಬೆಳ್ಳಿ ದರ 77,000 ರೂ.ನಷ್ಟು ಇತ್ತು. ಈ ವರ್ಷ ಅದು 1.05 ಲಕ್ಷ ರೂ.ಗೆ ಏರಿಕೆಯಾಗಿದೆ.