ಬೆಂಗಳೂರು : ಖಜಾನೆ-2ರ ತಂತ್ರಾಂಶದ ಮುಖಾಂತರ ಮಹಾಲೇಖಪಾಲರಿಗೆ ವಯೋ ನಿವೃತ್ತಿ/ಸ್ವ- ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಪ್ರಸ್ತುತ ಖಜಾನೆ-2 ಮತ್ತು ಅಕೌಂಟೆಂಟ್ ಜನರಲ್ ತಂತ್ರಾಂಶದ ನಡುವಿನ ಅನುಕಲನದ ಪ್ರಯೋಗಾತ್ಮಕ ಹಂತ ಪೂರ್ಣಗೊಂಡಿರುವುದರಿಂದ ಪ್ರಾಯೋಗಿಕವಾಗಿ ಜನವರಿ 2025 ರಿಂದ ಮಾರ್ಚ್ 2025ರವರೆಗೆ ಮೂರು ತಿಂಗಳ ಕಾಲ ರಾಜ್ಯದ ಎಲ್ಲಾ ಹಣ ಸೆಳೆಯುವ ಮತ್ತು ಬಟವಾಡ ಅಧಿಕಾರಿಗಳು (ಡಿಡಿಓ) ವಯೋ ನಿವೃತ್ತಿ/ಸ್ನ ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಆನ್ಲೈನ್ ಮತ್ತು ಭೌತಿಕವಾಗಿ ಮಹಾಲೇಖಪಾಲರಿಗೆ ಸಲ್ಲಿಸುವುದನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸುವಂತೆ ಖಜಾನೆ ಆಯುಕ್ತರು ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
:
ಖಜಾನೆ-2ರ ತಂತ್ರಾಂಶದ ಮುಖಾಂತರ ಪ್ರಾಯೋಗಿಕವಾಗಿ ಏಪ್ರಿಲ್ 2025 ರಿಂದ ಮೂರು ತಿಂಗಳ ಕಾಲ ರಾಜ್ಯದ ಎಲ್ಲಾ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು (ಡಿಡಿಓ) ವಯೋ ನಿವ್ಯತ್ರಿ/ಸ್ಟ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಅನ್ಲೈನ್ ನಲ್ಲಿ ದಾಖಲಿಸಿ ಮಂಜೂರು ಮಾಡುವುದು ಮತ್ತು ಭೌತಿಕವಾಗಿ ಸಿದ್ದಪಡಿಸಿರುವ ಅರ್ಜಿ ಹಾಗೂ ಸಂಬಂದಿಸಿದ ಎಲ್ಲಾ ದಾಖಲೆಗಳನ್ನು ಮಹಾಲೇಖಪಾಲರಿಗೆ ನಿಯಮಾನುಸಾರ ಸಲ್ಲಿಸಲು ಆದೇಶಿಸಿದೆ.


