
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬರಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ. ಗುರುಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ.
ವೆಂಕಟೇಶ್(60) ಮೃತಪಟ್ಟವರು. ಭಾನುವಾರ ರಾತ್ರಿ 9:30 ವೇಳೆಗೆ ಗ್ರಾಮಸ್ಥರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿಗೆ ಅಲ್ಲಿಗೆ ಹೋಗಿ ಅಂತಿಮ ದರ್ಶನ ಪಡೆದು ವೆಂಕಟೇಶ್ ಮನೆಗೆ ವಾಪಸ್ ಬರುವಾಗ ಕಾಡಾನೆ ಓಡಾಟದ ಸದ್ದು ಕೇಳಿಸಿದೆ. ಪತ್ನಿಗೆ ಪಟಾಕಿ ತರುವಂತೆ ಕೂಗಿ ಹೇಳಿದ ವೆಂಕಟೇಶ್ ಮನೆ ಆವರಣ ಪ್ರವೇಶಿ ಹಸು ಕಟ್ಟುವಷ್ಟರಲ್ಲಿ ಆನೆ ದಾಳಿ ನಡೆಸಿ ಸೊಂಡಿಲಿನಿಂದ ನೆಲಕ್ಕೆ ಬಡಿದು ತುಳಿದು ಹಾಕಿದೆ.
ವೆಂಕಟೇಶ್ ಅವರನ್ನು ಕುಟುಂಬದವರು ಹಾಗೂ ಸ್ಥಳೀಯರು ಉಳಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಸೋಮವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಜಿ.ಹೆಚ್. ಶ್ರೀನಿವಾಸ್ ಮೃತನ ಕುಟುಂಬದವರಿಗೆ 15 ಲಕ್ಷ ರೂ. ಮಧ್ಯಂತರ ಪರಿಹಾರ ಚೆಕ್ ವಿತರಿಸಿದ್ದಾರೆ.