ಬಿಹಾರದ ಪೂರ್ಣಿಯಾದಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿಗಳ ದುರಾಸೆಯ ಕಥೆಯೊಂದು ಬೆಳಕಿಗೆ ಬಂದಿದೆ. ಭೂಮಿಯ ಬೆಲೆ ಹೆಚ್ಚಿಸಲು ಖಾಸಗಿ ವ್ಯಕ್ತಿಗಳು ನದಿಗೆ ಅಕ್ರಮವಾಗಿ ಸೇತುವೆ ನಿರ್ಮಿಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಪೂರ್ಣಿಯಾ ನಗರದ ರಹಮತ್ ನಗರದ ವಾರ್ಡ್ ನಂಬರ್ 4 ರಲ್ಲಿರುವ ಕರಿ ಕೋಶಿ ನದಿಗೆ 60 ಅಡಿ ಉದ್ದ ಮತ್ತು 10 ಅಡಿ ಅಗಲದ ಸೇತುವೆಯನ್ನು ಪೂರ್ಣಿಯಾ ಮಹಾನಗರ ಪಾಲಿಕೆಯ ಒಪ್ಪಿಗೆಯಿಲ್ಲದೆ ನಿರ್ಮಿಸಲಾಗಿದೆ ಎಂದು ಪೂರ್ಣಿಯಾ ಮುನ್ಸಿಪಲ್ ಕಮಿಷನರ್ ಕುಮಾರ್ ಮಂಗಲಂ ಹೇಳಿದ್ದಾರೆ.
ಪೂರ್ಣಿಯಾ ಮುನ್ಸಿಪಲ್ ಕಾರ್ಪೊರೇಶನ್ (PMC) ವ್ಯಾಪ್ತಿಯಲ್ಲಿರುವ ಈ ಪ್ರದೇಶದಲ್ಲಿ, PMC ಅಧಿಕಾರಿಗಳ ಗಮನಕ್ಕೆ ಬಾರದೆ ಸೇತುವೆ ನಿರ್ಮಾಣವಾಗಿದೆ. ಸೂಕ್ತ ಕ್ರಮ ಕೈಗೊಳ್ಳಲು ಗುರುವಾರ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಆದರೆ ಸ್ವಾರ್ಥ ಸಾಧನೆ ಮಾಡಲು ಬಂದ ಜನರು ಸ್ಥಳೀಯರನ್ನು ಪ್ರಚೋದಿಸಿ PMC ಅಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ತಡೆದಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸೇತುವೆ ನಿರ್ಮಾಣದಲ್ಲಿ ಭೂ ಮಾಫಿಯಾ ಮತ್ತು ದಲ್ಲಾಳಿಗಳ ಕೈವಾಡದ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿಲ್ಲ. ಸೇತುವೆ ನಿರ್ಮಾಣ ಮಾಡಿದವರ ಗುರುತುಗಳನ್ನು ಸ್ಥಳೀಯರು ಬಹಿರಂಗಪಡಿಸುತ್ತಿಲ್ಲ ಎಂದು ಮುನ್ಸಿಪಲ್ ಕಮಿಷನರ್ ಹೇಳಿದ್ದಾರೆ. ಈ ಘಟನೆಗೆ ಮುಂಚೆ ಮುಜಾಫರ್‌ಪುರ ಜಿಲ್ಲೆಯ ಬುರ್ಹಿ ಗಂಡಕ್ ನದಿಯಲ್ಲಿ ಅಧಿಕಾರಿಗಳು ಅಪ್ರೋಚ್ ರಸ್ತೆಗಳಿಲ್ಲದೆ ಸೇತುವೆ ನಿರ್ಮಿಸಿದ್ದರು.
है ना ग़ज़ब का बिहार ..!
पूर्णिया- ज़मीन के ब्रोकर सब मिलकर ख़ुद के पैसे से पूल बना दिया ताकि वहां के लोगों को लगे सरकार कोई बड़ा प्रोजेक्ट लेकर आ रही है है और वहां के ज़मीन की क़ीमत अधिक हो जाये ..!#Bihar #Purniya pic.twitter.com/Xdkl2q1lnZ
— Mukesh singh (@Mukesh_Journo) March 28, 2025