
ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಮೇದಿನಿ ಗ್ರಾಮದ ರಾಮಕಟ್ಟೆಯ ಬಳಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ.
ಕೊಳ್ಳೆಗಾಲದ ಭರತ್(17) ಮತ್ತು ಲಿಖಿತ್(18) ನೀರು ಪಾಲಾದವರು ಎಂದು ಹೇಳಲಾಗಿದೆ. ನೀರಿನ ಸೆಳೆತಕ್ಕೆ ಭರತ್ ಮತ್ತು ಲಿಖಿತ್ ಕೊಚ್ಚಿ ಹೋಗಿದ್ದಾರೆ. ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.