ಮನೆಯಂಗಳದಲ್ಲಿ ಆಟವಾಡುತ್ತಿದ್ದ ತನ್ನಿಬ್ಬರು ಹೆಣ್ಣುಮಕ್ಕಳನ್ನು ವಿಷಕಾರಿ ಹಾವಿನಿಂದ ರಕ್ಷಿಸಿದ ತಾಯಿಯ ಸಮಯಪ್ರಜ್ಞೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯ ಮುಂಭಾಗದಲ್ಲಿ ತಾಯಿ ಬಟ್ಟೆಯ ಬುಟ್ಟಿಯೊಂದಿಗೆ ನಿಂತಿದ್ದು, ಆಕೆಯ ಇಬ್ಬರು ಹೆಣ್ಣುಮಕ್ಕಳು ಹತ್ತಿರದಲ್ಲಿ ಆಟವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿಯೇ ಮನೆಯೊಳಗೆ ನುಸುಳಿದ್ದ ಹಾವು ಮರದ ಪಕ್ಕದಲ್ಲಿರುವುದನ್ನು ನೋಡಿದ ತಾಯಿ ತಕ್ಷಣವೇ ಬುಟ್ಟಿಯನ್ನು ಬಿಸಾಡಿ ಮಕ್ಕಳ ರಕ್ಷಣೆಗೆ ಧಾವಿಸಿದ್ದಾಳೆ.
ಕ್ಷಣ ಮಾತ್ರವೂ ವ್ಯರ್ಥ ಮಾಡದೆ, ಆಕೆ ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸರಿಸಿದ್ದಾಳೆ. ನಂತರ ಹಾವಿಗೆ ಹತ್ತಿರದಲ್ಲಿದ್ದ ಇನ್ನೊಂದು ಮಗುವನ್ನು ಎತ್ತಿ ದುರಂತವನ್ನು ತಪ್ಪಿಸಿದ್ದಾಳೆ. ತಾಯಿಯ ಈ ಸಮಯಪ್ರಜ್ಞೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
“ಮಕ್ಕಳ ಮೇಲೆ ತಾಯಿಯ ಪ್ರೀತಿ ಮರಣವನ್ನೇ ಗೆಲ್ಲುತ್ತದೆ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಇದು ಹಾನಿಕರವಲ್ಲದ ಕಪ್ಪು ಹಾವು. ಇವು ಸಾಮಾನ್ಯವಾಗಿ ಇಲಿಗಳಂತಹ ಕೀಟಗಳನ್ನು ಕೊಲ್ಲುತ್ತವೆ ಮತ್ತು ವಿಷಕಾರಿ ಹಾವುಗಳನ್ನು ಹಿಮ್ಮೆಟ್ಟಿಸುತ್ತವೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Mother tries to save her two daughters from a venomous snake in Australia pic.twitter.com/UYLtsIuk00
— Wild content (@NoCapMediaa) March 26, 2025