ಮಳೆಗಾಲ. ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕೆಂಬ ಬಯಕೆ ಸಾಮಾನ್ಯ. ದಹಿ ಕಬಾಬ್ ಜೊತೆ ಟೀ ಕುಡಿದ್ರೆ ಅದ್ರ ಮಜವೇ ಬೇರೆ. ನೀವು ಮನೆಯಲ್ಲಿ ದಹಿ ಕಬಾಬ್ ಮಾಡಿ ನೋಡಿ.
ದಹಿ ಕಬಾಬ್ ಮಾಡಲು ಬೇಕಾಗುವ ಪದಾರ್ಥ :
150 ಗ್ರಾಂ ಮೊಸರು, 250 ಗ್ರಾಂ ಪನ್ನೀರ್, 45 ಗ್ರಾಂ ಈರುಳ್ಳಿ, 25 ಗ್ರಾಂ ಗೋಡಂಬಿ, 2 ಚಮಚ ಕೊತ್ತಂಬರಿ, 50 ಗ್ರಾಂ ಬ್ರೆಡ್ ತುಣುಕು, 1 ಚಮಚ ಕೆಂಪು ಮೆಣಸಿನ ಪುಡಿ, ಒಂದು ಚಮಚ ಗರಂ ಮಸಾಲೆ, 2 ಚಮಚ ಹಸಿರು ಮೆಣಸಿನ ಕಾಯಿ, 1/8 ಚಮಚ ಸಕ್ಕರೆ, 1/8 ಚಮಚ ಉಪ್ಪು, ಸ್ವಲ್ಪ ಬ್ರೆಡ್ ಪುಡಿ.
ದಹಿ ಕಬಾಬ್ ಮಾಡುವ ವಿಧಾನ :
ಒಂದು ಪಾತ್ರೆಗೆ ಮೊಸರು, ಈರುಳ್ಳಿ, ಪನ್ನೀರ್, ಕೊತ್ತಂಬರಿ, ಬ್ರೆಡ್ ತುಣುಕು, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಹಸಿರು ಮೆಣಸಿನ ಕಾಯಿ, ಸಕ್ಕರೆ, ಉಪ್ಪು, ಗೋಡಂಬಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಬ್ರೆಡ್ ಪುಡಿಯಲ್ಲಿ ರೋಲ್ ಮಾಡಿ.
ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ರೋಲ್ ಮಾಡಿದ್ದ ಕಬಾಬನ್ನು ಕರಿಯಿರಿ. ಕಂದು ಬಣ್ಣ ಬಂದ ನಂತ್ರ ಗ್ಯಾಸ್ ಆಫ್ ಮಾಡಿ. ರುಚಿ ರುಚಿ ದಹಿ ಕಬಾಬ್ ಸವಿಯಲು ಸಿದ್ಧ.