
ನವದೆಹಲಿ: ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯ ಔಷಧಗಳು ಶೇಕಡ 1.7 ರಷ್ಟು ಏರಿಕೆಯಾಗಲಿವೆ ಎಂದು ಹೇಳಲಾಗಿದೆ.
ಈ ಔಷಧಿಗಳ ನಿರೀಕ್ಷಿತ ದರ ಹೆಚ್ಚಳ ಕುರಿತು ಮಾತನಾಡಿದ ರಾಸಾಯನಶಾಸ್ತ್ರಜ್ಞರು ಮತ್ತು ಔಷಧ ಶಾಸ್ತ್ರಜ್ಞರ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ಅವರು, ಕಚ್ಚಾ ವಸ್ತು ಬೆಲೆ ಏರಿಕೆ, ಇತರೆ ವೆಚ್ಚಗಳು ಹೆಚ್ಚಾಗುತ್ತಿರುವ ಕಾರಣ ಈ ಕ್ರಮದಿಂದ ಔಷಧ ಉದ್ಯಮಕ್ಕೆ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ.
ಆದರೆ ದರ ಏರಿಕೆಯಾಗಲು 90 ದಿನ ಹಿಡಿಯುತ್ತದೆ. ಹಳೆಯ ದಾಸ್ತಾನು ಖಾಲಿಯಾಗಲು ಮೂರು ತಿಂಗಳು ಬೇಕಿದೆ. ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಔಷಧಗಳ ದರ ಶೇಕಡ 1.7ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಇತರ ಪ್ರತಿಜೀವಕಗಳು ಸೇರಿದಂತೆ ಸರ್ಕಾರಿ ನಿಯಂತ್ರಿತ ಔಷಧಿಗಳು ಶೀಘ್ರದಲ್ಲೇ ದುಬಾರಿಯಾಗಲಿವೆ. ಈ ಔಷಧಿಗಳ ಬೆಲೆಯಲ್ಲಿ ಶೇಕಡಾ 1.7 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.