ಡಿಜಿಟಲ್ ಡೆಸ್ಕ್ : ಅಮೆರಿಕದ ಟಿಕ್ ಟಾಕ್ ಸ್ಟಾರ್ ‘ಜೋಶುವಾ ಬ್ಲ್ಯಾಕ್ಲೆಡ್ಜ್’ ತಮ್ಮ 16 ನೇ ವಯಸ್ಸಿನಲ್ಲಿ ನಿಧನರಾದರು.
ಸಾಮಾಜಿಕ ಮಾಧ್ಯಮಗಳಲ್ಲಿ ಟಿಕ್ ಟಾಕ್ ಮಾಡುವ ಮೂಲಕ ಟಿಕ್ ಟಾಕ್ ಸ್ಟಾರ್ ‘ಜೋಶುವಾ ಬ್ಲ್ಯಾಕ್ಲೆಡ್ಜ್’16 ನೇ ವಯಸ್ಸಿಗೆ ಸಂಚಲನ ಮೂಡಿಸಿದ್ದರು. ಮಾರ್ಚ್ 18 ರಂದು ಉತ್ತರ ಕೆರೊಲಿನಾದ ನ್ಯೂಪೋರ್ಟ್ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಸಾವಿಗೆ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ ತಾಯಿ ಹಾಗೂ ಸಹೋದರ ಯೋಷೀಯರನ್ನು ಅಗಲಿದ್ದಾರೆ.ಈತ ಟಿಕ್ ಟಾಕ್ ನಲ್ಲಿ 1 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.