ಧಾರವಾಡ : ದೀನ್ದಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಧಾರವಾಡ ಶಹರದ ಜಿಲ್ಲಾ ಆಸ್ಪತ್ರೆ ಆವರಣದ ಕಟ್ಟಡದಲ್ಲಿ ಕಿರು ಅಕ್ಕ ಕೆಫೆ ಯೋಜನೆ ಅನುಷ್ಠಾನಗೊಳಿಸಲು ಮತ್ತು ನಿರ್ವಹಿಸಲು ಧಾರವಾಡ ಶಹರದ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಷರತ್ತು: ಅರ್ಜಿ ಸಲ್ಲಿಸಬಯಸುವ ಸ್ವ-ಸಹಾಯ ಗುಂಪು ಕಡ್ಡಾಯವಾಗಿ ಡೇ-ನಲ್ಮ್ ಯೋಜನೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ರಚನೆಗೊಂಡಿರಬೇಕು ಮತ್ತು ಎಂಐಎಸ್ ನಂಬರನ್ನು ಹೊಂದಿರಬೇಕು. ಡೇ-ನಲ್ಮ್ ಯೋಜನೆಯಡಿ ಪ್ರದೇಶ ಮಟ್ಟದ ಒಕ್ಕೂಟ (ಎಎಲ್ಎಫ್) ದಲ್ಲಿ ಸದಸ್ಯತ್ವ ಹೊಂದಿರಬೇಕು. ಪಾಕ ಪರಿಣಿತಿ ಹೊಂದಿದವರಿರಬೇಕು ಮತ್ತು ಆಸಕ್ತರಿದ್ದು, ಪರಿಣಿತಿ ಪ್ರಮಾಣ ಪತ್ರ ಹೊಂದಿರಬೇಕು. ಸ್ವಂತ ಬಂಡವಾಳ ಹೂಡಲು ಸಶಕ್ತರಾಗಿಬೇಕು. ಮತ್ತು ಯಾವುದೇ ಹಣಕಾಸು ಸಂಸ್ಥೆ/ಬ್ಯಾಂಕುಗಳಲ್ಲಿ ಸುಸ್ತಿದಾರರಾಗಿರಬಾರದು. ಆಯ್ಕೆಯ ಸಂದರ್ಭದಲ್ಲಿ ಕೆಫೆ ನಿರ್ವಹಣೆಗೆ ಸಂಬಂಧಪಟ್ಟ ಶ್ರೇಣಿಕರಣ ಮತ್ತು ಆಯ್ಕೆಯ ಪ್ರಕ್ರೀಯೆಗೆ ಬದ್ದರಾಗಿರಬೇಕು. GST, PAN, FSSAI ಪ್ರಮಾಣ ಪತ್ರ ಹೊಂದಿದವರಿರಬೇಕು. ಪ್ರಾರಂಭಿಕ ಹಂತದಲ್ಲಿ ಒಂದು ವರ್ಷದ ಅವಧಿಗೆ ಮಾತ್ರ ಒಡಂಬಡಿಕೆಗೆ ಒಪ್ಪಂದ ಮಾಡಿಕೊಳ್ಳಲು ಸಿದ್ದರಿರಬೇಕು.
ಆಸಕ್ತರು ಈ ಷರತ್ತುಗಳಿಗೆ ಒಳಪಟ್ಟು ನಿಗದಿಪಡಿಸಿದ ತಾಂತ್ರಿಕ ಮತ್ತು ಆರ್ಥಿಕ ದಾಖಲೆಗಳ ಮತ್ತು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಮುದಾಯ ಸಂಘಟನಾಧಿಕಾರಿಗಳು ವಲಯ ಕಚೇರಿ ನಂ-01 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಕಚೇರಿಗೆ ಮಾರ್ಚ್ 26, 2025 ರಿಂದ ಏಳು ದಿನಗಳೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸಮುದಾಯ ಸಂಘಟನಾಧಿಕಾರಿಗಳು ವಲಯ ಕಚೇರಿ ನಂ-01 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ (ಮೊ-9632612668) ಸಂಪರ್ಕಿಸಬಹುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.