ಲಾಸ್ ಏಂಜಲೀಸ್ನಿಂದ ಚೀನಾಕ್ಕೆ ಹೊರಟಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನ, ಪೈಲಟ್ ಪಾಸ್ಪೋರ್ಟ್ ಮರೆತಿದ್ದರಿಂದ ದಿಢೀರ್ ಯು-ಟರ್ನ್ ಮಾಡಿದೆ. ಈ ಘಟನೆಯಿಂದಾಗಿ ವಿಮಾನವು ನಿಗದಿತ ಸಮಯಕ್ಕಿಂತ ಆರು ಗಂಟೆಗಳ ನಂತರ ಶಾಂಘೈಗೆ ತಲುಪಿತು. ವಿಮಾನದಲ್ಲಿ 257 ಪ್ರಯಾಣಿಕರು ಮತ್ತು 13 ಸಿಬ್ಬಂದಿ ಇದ್ದರು.
ವಿಮಾನವು ಪೆಸಿಫಿಕ್ ಸಾಗರದ ಮೇಲೆ ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಈ ಎಡವಟ್ಟು ಬೆಳಕಿಗೆ ಬಂದಿದೆ. ಎರಡು ಗಂಟೆಗಳ ನಂತರ, ವಿಮಾನವು ಸ್ಯಾನ್ ಫ್ರಾನ್ಸಿಸ್ಕೋಗೆ ವಾಪಸ್ಸಾಯಿತು. ನಂತರ, ಹೊಸ ಸಿಬ್ಬಂದಿಯೊಂದಿಗೆ ವಿಮಾನ ಚೀನಾಕ್ಕೆ ಹೊರಟಿದೆ.
ಈ ಘಟನೆಯ ನಂತರ, ಯುನೈಟೆಡ್ ಏರ್ಲೈನ್ಸ್ ಪ್ರತಿಕ್ರಿಯಿಸಿ, “ಪೈಲಟ್ ತಮ್ಮ ಪಾಸ್ಪೋರ್ಟ್ ಅನ್ನು ವಿಮಾನದಲ್ಲಿ ಹೊಂದಿರಲಿಲ್ಲ. ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಹೊಸ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಊಟದ ಕೂಪನ್ಗಳು ಮತ್ತು ಪರಿಹಾರವನ್ನು ನೀಡಲಾಗಿದೆ” ಎಂದು ಹೇಳಿದೆ.
ಆದರೆ, ಈ ಪರಿಹಾರದ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್ನಲ್ಲಿ ಒಬ್ಬ ಬಳಕೆದಾರರು, “ಏಳು ಗಂಟೆಗಳ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಪ್ರಯಾಣಿಕರಿಗೆ 15 ಡಾಲರ್ ಊಟದ ಕೂಪನ್ಗಳನ್ನು ನೀಡಲಾಗಿದೆ” ಎಂದು ಟೀಕಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು, “ವಿಮಾನವು ಇಳಿದ ನಂತರ ಏನಾಗುತ್ತದೆ ? ವಿಮಾನ ನಿಲ್ದಾಣದಲ್ಲಿ ಪೈಲಟ್ ಪಾಸ್ಪೋರ್ಟ್ ಇಲ್ಲದಿರುವುದು ತಿಳಿದರೆ ? ಪಾಸ್ಪೋರ್ಟ್ ಹೊರತುಪಡಿಸಿ, ಪೈಲಟ್ಗಳನ್ನು ದೃಢೀಕರಿಸಲು ಬೇರೆ ಮಾರ್ಗವಿಲ್ಲವೇ ?” ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು, “ಇದನ್ನು ಅವರ ಪರಿಶೀಲನಾ ಪಟ್ಟಿಗೆ ಸೇರಿಸಬೇಕು. ಅವರು ಎಲ್ಲಾ ರೀತಿಯ ಪರಿಶೀಲನಾ ಪಟ್ಟಿಗಳನ್ನು ಹೊಂದಿದ್ದಾರೆ. ಇದನ್ನೂ ಸೇರಿಸಿ” ಎಂದು ಹೇಳಿದ್ದಾರೆ. ಈ ಘಟನೆಯು ವಿಮಾನಯಾನ ಸಂಸ್ಥೆಯ ಪರಿಶೀಲನಾ ಪ್ರಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
An update for our customers whose travel has been impacted by the closure at London Heathrow Airport. At this time, we expect to operate most scheduled Friday departures to London.
We’ve issued a travel waiver for impacted flights to and from London, including the option to go… pic.twitter.com/K4LDodI7zk
— United Airlines (@united) March 21, 2025