alex Certify BIG NEWS: ಲಾಂಗ್ ಹಿಡಿದು ರೀಲ್ಸ್ ಪ್ರಕರಣ: ವಿಚಾರಣೆಗೆ ಠಾಣೆಗೆ ಹಾಜರಾದ ವಿನಯ್, ರಜತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಂಗ್ ಹಿಡಿದು ರೀಲ್ಸ್ ಪ್ರಕರಣ: ವಿಚಾರಣೆಗೆ ಠಾಣೆಗೆ ಹಾಜರಾದ ವಿನಯ್, ರಜತ್

ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ಇಬ್ಬರೂ ವಿಚಾರಣೆಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ತಡೆ ಕಾಯ್ದೆಯಡಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ನಿನ್ನೆ ನಡೆದ ವಿಚಾರಣೆ ವೇಳೆ ರೀಲ್ಸ್ ನಲ್ಲಿ ಹಿಡಿದಿದ್ದು ಒರಿಜಿನಲ್ ಮಚ್ಚಲ್ಲ, ಫೈಬರ್ ಮಚ್ಚು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಅಲ್ಲದೇ ರೀಲ್ಸ್ ವಿಡಿಯೋಗೆ ಬಳಸಲಾದ ಮಚ್ಚು ಎಂದು ಫೈಬರ್ ಮಚ್ಚನ್ನು ಪೊಲೀಸರ ಮುಂದೆ ಒಪ್ಪಿಸಿ, ಸುಳ್ಳು ಹೇಳಿ ತನಿಖೆಯ ದಾರಿ ತಪ್ಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಪೊಲೀಸರ ಸೂಚನೆ ಮೇರೆಗೆ ಇಂದು ವಿನಯ್ ಹಾಗೂ ರಜತ್ ಬಸವೇಶ್ವರ ನಗರ ಠಾಣೆಗೆ ವಿಚಾರಣೆ ಹಾಜರಾಗಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...