ಬೆಂಗಳೂರು : ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಸ್ತಿ ಕಣಜ ತಂತ್ರಾಂಶದಲ್ಲಿ ಗಣಕೀಕರಣಗೊಂಡ ಆಸ್ತಿಗಳ ವಿವರಗಳನ್ನು ಪರೀಶೀಲನೆಗೆ ಒಳಪಡಿಸಿ, ಇ-ಆಸ್ತಿ ತಂತ್ರಾಶದಲ್ಲಿ ಇಂದೀಕರಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಇ-ಆಸ್ತಿ ತಂತ್ರಾಂಶವನ್ನು ಏಪ್ರಿಲ್- 2016 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಿ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರವು ಸುತ್ತೋಲೆಗಳ ಮೂಲಕ ಮಹಾನಗರಪಾಲಿಕೆಗಳಲ್ಲಿಯೂ ಇ-ಆಸ್ತಿ ತಂತ್ರಾಂಶದ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳು ಇ-ಆಸ್ತಿ ತಂತ್ರಾಂಶದ ಮೂಲಕ ಆಸ್ತಿಗಳ ಡಿಜಿಟಲೀಕರಣ, ಆಸ್ತಿ ಮಾಲೀಕತ್ವ ಹಕ್ಕು ವರ್ಗಾವಣೆ ಮತ್ತು ಡಿಜಿಟಲ್ ಸಹಿಯುಳ್ಳ ನಮೂನೆ-3/2 ರನ್ನು ಸೃಜಿಸಬಹುದಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ವ್ಯಾಪ್ತಿಯಲ್ಲಿರುವ 57 ಲಕ್ಷ ಆಸ್ತಿಗಳಲ್ಲಿ ಇದುವರೆಗೆ 20 ಲಕ್ಷ ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿ, ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸಲಾಗಿದೆ ಹಾಗೂ ಸ್ವತ್ತಿನ ಮಾಲೀಕರಿಗೆ ನಮೂನೆ- 2/3 ವಿತರಿಸಲಾಗಿರುತ್ತದೆ. ಇ-ಆಸ್ತಿ ತಂತ್ರಾಂಶದ ಮೂಲಕ ಸುಮಾರು 20 ಲಕ್ಷ ಆಸ್ತಿ ಮಾಲೀಕತ್ವ ಹಕ್ಕು ಬದಲಾವಣೆಗೆ ಕ್ರಮವಹಿಸಲಾಗಿರುತ್ತದೆ. ಬಾಕಿ ಉಳಿದಿರುವ 37 ಲಕ್ಷ ಆಸ್ತಿಗಳನ್ನು ಡಿಜಿಟೈಸ್ ಮಾಡಿ, ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸುವುದು ಬಾಕಿ ಇರುತ್ತದೆ.
ಉಲ್ಲೇಖ (1) ರ ಸುತ್ತೋಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳ ಆಸ್ತಿ ತೆರಿಗೆ ಬೇಡಿಕೆ, ವಸೂಲಿ ಮತ್ತು ಬಾಕಿ ವಿವರಗಳನ್ನು ನಿರ್ವಹಿಸಲು ನಿಗಧಿಪಡಿಸಿರುವ ನಮೂನೆ ໖໐໖-24 ವಹಿಯನ್ನು ನಿಗಧಿತ ಕಾಲಮಿತಿಯೊಳಗೆ ಆದ್ಯತೆಯ ಮೇರೆಗೆ ಕಾಲೋಚಿತಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು ಹಾಗೂ ಉಲ್ಲೇಖ (2) ರ ಸುತ್ತೋಲೆಯಲ್ಲಿ ಕಾಲೋಚಿತಗೊಳಿಸಲಾದ ಮಾಹಿತಿಯನ್ನು ಅಗತ್ಯ ದಾಖಲೆಗಳೊಂದಿಗೆ KMDS ನಿಂದ ಅಭಿವೃದ್ಧಿ ಪಡಿಸಲಾದ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲು ಸೂಚಿಸಲಾಗಿರುತ್ತದೆ. ಸದರಿ ಕಾರ್ಯವು ಪೂರ್ಣಗೊಂಡು ಈಗಾಗಲೇ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿ, ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ. ಉಲ್ಲೇಖ (03) ರ ಸುತ್ತೋಲೆಯಲ್ಲಿ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಮಾಹಿತಿಯನ್ನು ಸ್ವತ್ತಿನ ಮಾಲೀಕರು ಮಾಹಿತಿಗೆ ನೀಡಿ, ತಿದ್ದುಪಡಿಗಳಿದ್ದಲ್ಲಿ ಅಗತ್ಯ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಸೂಕ್ತ ತಿದ್ದುಪಡಿ ಮಾಡುವ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾರ್ಯವಿಧಾನವನ್ನು ಅನುಸರಿಸುವ ಅವಶ್ಯಕತೆ ಇರುವುದನ್ನು ಪರಿಗಣಿಸಿ, ದಿನಾಂಕ: 24.01.2025 ರ ಸುತ್ತೋಲೆಯನ್ನು ಹಿಂಪಡೆದು, ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಮಾಹಿತಿಯನ್ನು Validate ಮಾಡಿ ಇ-ಆಸ್ತಿ ತಂತ್ರಾಂಶದಲ್ಲಿ ಇಂಡೀಕರಣ ಮಾಡಬೇಕಾಗಿರುತ್ತದೆ ಹಾಗೂ ಪ್ರತಿ ಆಸ್ತಿಗೆ ನಮೂನೆ-
2/3 ನ್ನು ಸೃಜಿಸಿ ಆಸ್ತಿಯ ಮಾಲೀಕರಿಗೆ ನೀಡಬೇಕಾಗಿರುತ್ತದೆ. ಸದರಿ ಕಾರ್ಯವನ್ನು ಕೈಗೊಳ್ಳಲು ಕೆಳಕಂಡ ಕಾರ್ಯವಿಧಾನವನ್ನು ಅನುಸರಿಸಬೇಕಾಗಿರುತ್ತದೆ.
1. ತಂತ್ರಾಂಶದಲ್ಲಿರುವ ಮಾಹಿತಿಯನ್ನು ಪ್ರಚುರ ಪಡಿಸಲು KMDS ನಿಂದ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡು ದಿನಾಂಕ: 05.02.2025 ರ ಒಳಗಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚುರ ಮಾಡಲು ದತ್ತಾಂಶ ಸಿದ್ಧಪಡಿಸುವುದು.
2. KMDSನಿಂದ ಪ್ರಚುರ ಪಡಿಸಲು ನೀಡಲಾಗುವ ದತ್ತಾಂಶವನ್ನು ದಿನಾಂಕ:10.02.2025 ರಿಂದ ದಿನಾಂಕ: 25.02.2025 ರವರೆಗೆ ಮಹಾನಗರ ಪಾಲಿಕೆ /ನಗರ ಸ್ಥಳೀಯ ಸಂಸ್ಥೆಯ ವೆಬ್ ಸೈಟಿನಲ್ಲಿ ಪ್ರಚುರಪಡಿಸುವುದು ಮತ್ತು ಕಛೇರಿಯಲ್ಲಿ ಮುದ್ರಣ ಪ್ರತಿಯನ್ನು ವಿಕ್ಷಿಸಲು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು.
3. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಪ್ರಚುರ ಪಡಿಸಲಾದ ದತ್ತಾಂಶದ ಕುರಿತು ತಮ್ಮ ಸ್ವತ್ತಿನ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ದಿನಾಂಕ:25.02.2025 ರೊಳಗೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯ ಕಛೇರಿಗೆ ಸಲ್ಲಿಸುವಂತೆ ತಿಳಿಸುವುದು. ಈ ಕುರಿತು ಲಭ್ಯವಿರುವ ಮೊಬೈಲ್ ಸಂಖ್ಯೆಗಳಿಗೆ SMS ಮೂಲಕ ಮಾಹಿತಿಯನ್ನು . (General message)
4. ಸದರಿ ಮಾಹಿತಿ ಮನೆ ಮನೆಗೆ ತಲುಪುವಂತೆ ಮಾಡಲು ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವುದು.
5. ಪ್ರಚುರಪಡಿಸಲಾದ ದತ್ತಾಂಶದ ಕುರಿತು ಸ್ವೀಕೃತವಾದ ತಿದ್ದುಪಡಿಗಳನ್ನು ಸ್ವೀಕೃತವಾದ 07 ದಿನಗಳ ಒಳಗಾಗಿ ಇತ್ಯರ್ಥ ಪಡಿಸಿ, ತಂತ್ರಾಂಶದಲ್ಲಿ ಕಾಲೋಚಿತಗೊಳಿಸುವುದು.
6. ಸದರಿ ಕಾರ್ಯದ ಸಂಬಂಧ ಕೆಳಕಂಡಂತೆ ನೋಡಲ್ ಅಧಿಕಾರಿಗಳನ್ನು ನೇಮಿಸುವುದು ಮತ್ತು ಸದರಿರವರ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ಸರ್ವಾಜನಿಕರಿಗೆ ಲಭ್ಯವಾಗುವಂತೆ ಮಾಡುವುದು, ಸಹಾಯವಾಣಿಯನ್ನು ಸ್ಥಾಪನೆ ಮಾಡುವುದು.
7. ಸದರಿ ಕಾರ್ಯವನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ತೊಡಗಿಸಿಕೊಂಡು ದಿನಾಂಕ: 01.03.2025 ರ ಒಳಗಾಗಿ ಸಂಪೂರ್ಣ ಮಾಹಿತಿಯನ್ನು ಸಿದ್ಧಪಡಿಸಿ, ಇ-ಆಸ್ತಿ ತಂತ್ರಾಂಶಕ್ಕೆ ಇಂಡೀಕರಣ ಮಾಡಲು ಸಿದ್ಧಪಡಿಕೊಳ್ಳುವುದು.
8. ಸದರಿ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧ-1 ನಮೂನೆಯಲ್ಲಿ ಮಾಹಿತಿಯನ್ನು ಯೋಜನಾ ನಿರ್ದೇಶಕರು, ಸಂಗ್ರಹಿಸಿ, ಪರಿಶೀಲಿಸಿ (ONLINE ಮೂಲಕ) ಪ್ರತಿ ದಿನ ಸಂಜೆ 5.30ರ ಒಳಗೆ ನಿರ್ದೇಶನಾಲಯಕ್ಕೆ ವರದಿ ಮಾಡುವುದು.
9. ನಗರ ಸ್ಥಳೀಯ ಸಂಸ್ಥೆಯಲ್ಲಿ ಸದರಿ ಪ್ರಕ್ರಿಯೆಯ ಕುರಿತು ಯೋಜನಾ ನಿರ್ದೇಶಕರು ವಾರಕ್ಕೊಮ್ಮೆ ಬೇಟಿ ನೀಡುವುದು. ಸದರಿ ಕಾರ್ಯವು ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ಕೈಗೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿ, ಅಗತ್ಯ ಮಾರ್ಗದರ್ಶನ ಮಾಡುವುದು. ಸದರಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಥವಾ ವಿಳಂಭಕ್ಕೆ ಕಾರಣರಾಗುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದು ಎಂದು ಸೂಚಿಸಿದೆ.



