
ಯುಕೆ ಬೀಚ್‌ನಲ್ಲಿ ರೆಕ್ಕೆಗಳನ್ನು ಹೊಂದಿರುವ ನಿಗೂಢ ಜೀವಿ ಅಸ್ಥಿಪಂಜರ ಕಂಡುಬಂದಿದೆ. ಇದರ ಫೋಟೋಗಳು ವೈರಲ್ ಆಗಿವೆ.
ಯುಕೆ ಬೀಚ್‌ನಲ್ಲಿ ಕಂಡ ವಿಚಿತ್ರ ದೃಶ್ಯ ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ, ಕೆಲವರು ಪೌರಾಣಿಕ ಮತ್ಸ್ಯಕನ್ಯೆಯ ಅವಶೇಷ ಅಥವಾ ಅನ್ಯಗ್ರಹ ಜೀವಿಯ ಅವಶೇಷಗಳು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಕೆಂಟ್‌ನ ಮಾರ್ಗೇಟ್‌ನಲ್ಲಿ ಕರಾವಳಿಯಲ್ಲಿ ಅಡ್ಡಾಡುತ್ತಿದ್ದ ದಂಪತಿಗಳು ವಿಚಿತ್ರವಾದ “ಅಸ್ಥಿಪಂಜರದಂತಹ” ಆಕೃತಿಯನ್ನು ಕಂಡರು, ಇದು ಆನ್‌ಲೈನ್‌ನಲ್ಲಿ ಕುತೂಹಲ ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಸೋಮವಾರ, ಮಾರ್ಚ್ 10 ರಂದು, ಪೌಲಾ ರೇಗನ್ ಮತ್ತು ಅವರ ಪತಿ ಡೇವ್, ತೀರದಲ್ಲಿ ವಿಶ್ರಾಂತಿ ಪಡೆಯಲು ಹೋಗಿದ್ದ ವೇಳೆ ಭಾಗಶಃ ಮರಳಿನಲ್ಲಿ ಹೂತುಹೋಗಿದ್ದ ಮತ್ತು ಕಡಲಕಳೆಯಿಂದ ಸುತ್ತುವರೆದಿದ್ದ ವಸ್ತುವು ಮೀನಿನಂತಹ ಬಾಲವನ್ನು ಹೊಂದಿರುವ ಹುಮನಾಯ್ಡ್ ಅಸ್ಥಿಪಂಜರದ ರಚನೆಯನ್ನು ಹೊಂದಿತ್ತು. ಮೊದಲಿಗೆ, ಪೌಲಾ ಅದನ್ನು ಡ್ರಿಫ್ಟ್‌ವುಡ್ ಅಥವಾ ಸತ್ತ ಸೀಲ್ ಎಂದು ತಪ್ಪಾಗಿ ಭಾವಿಸಿದರು, ಆದರೆ ಅವರು ಹತ್ತಿರ ಬರುತ್ತಿದ್ದಂತೆ, ನಿಗೂಢ ಆಕೃತಿ ಕಂಡು ಬಂದಿದೆ.
ವಿಚಿತ್ರ ವಸ್ತುವಿನ ಸುತ್ತಲೂ ಜನಸಮೂಹ ಜಮಾಯಿಸಿ, ಅದು ಏನಾಗಿರಬಹುದು ಎಂಬುದನ್ನು ತಿಳಿಯಲು ಪ್ರಯತ್ನಿಸಿದ್ದಾರೆ. ಪೌಲಾ ವಿಲಕ್ಷಣ ಆಕೃತಿಯ ಛಾಯಾಚಿತ್ರಗಳನ್ನು ತೆಗೆದುಕೊಂಡರು, ಅದು ಆನ್‌ಲೈನ್‌ನಲ್ಲಿ ವೈರಲ್ ಆಯಿತು,
ತಲೆ ಅಸ್ಥಿಪಂಜರದಂತೆ ಕಾಣುತ್ತಿತ್ತು, ಆದರೆ ಮೀನಿನ ಬಾಲ ಇದ್ದ ಹಿಂಭಾಗವು ಮೃದು ಮತ್ತು ಸ್ಕ್ವಿಡ್ ಆಗಿತ್ತು. ಇದು ಲೋಳೆಯಂತೆ ಅಥವಾ ಕೊಳೆತಂತೆ ಭಾಸವಾಗಲಿಲ್ಲ, ಆದರೆ ಅದು ಖಂಡಿತವಾಗಿಯೂ ವಿಚಿತ್ರವಾಗಿತ್ತು ಎಂದು ಪೌಲಾ ಹೇಳಿದ್ದಾರೆ.
ತಜ್ಞರು ಇದೇನು ಎಂದು ಇನ್ನೂ ದೃಢಪಡಿಸಿಲ್ಲ, ಆದರೆ ಸಮುದ್ರ ಜೀವಶಾಸ್ತ್ರಜ್ಞರು ಇದು ಕಾಲಾನಂತರದಲ್ಲಿ ಹದಗೆಟ್ಟ ದೊಡ್ಡ ಮೀನು ಅಥವಾ ಸಮುದ್ರ ಸಸ್ತನಿಯ ಅವಶೇಷಗಳಾಗಿರಬಹುದು ಎಂದರೆ, ಇತರರು ಇದು ಕಲಾತ್ಮಕ ಶಿಲ್ಪವಾಗಿರಬಹುದು ಅಥವಾ ಮುಳುಗಿದ ಹಡಗಿನ ತುಣುಕಾಗಿರಬಹುದು ಎಂದು ಹೇಳಿದ್ದಾರೆ.
🤪Creepy skeleton-like figure with fins shocks beachgoers: ‘I just knew no one would believe us’
Call it a UFO: an unidentified floating object.
Beachcombers were baffled over a creepy, “skeleton-like” figure with fins that washed ashore in the UK, as seen in viral photos… pic.twitter.com/p0nIDDiDyQ
— Melissa Hallman (@dotconnectinga) March 21, 2025