ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಕಣ್ಮನ ಸೆಳೆಯುವ ಜಲಪಾತಗಳಿವೆ. ಮಳೆಗಾಲದಲ್ಲಿ ಹೊಸ ಕಳೆಯನ್ನು ಪಡೆಯುವ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.
ಬೇಸಿಗೆಯಲ್ಲಿ ಆಹ್ಲಾದಕರ ವಾತಾವರಣಕ್ಕಾಗಿ ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರು ಮಳೆಗಾಲದಲ್ಲಿ ಮಂಜು, ಮಳೆಗೆ ಮನಸೋಲುತ್ತಾರೆ.
ಮಳೆಗಾಲದಲ್ಲಿ ದಟ್ಟ ಹಸಿರಿನ ನಡುವೆ ಹಾಲಿನಂತೆ ಧುಮ್ಮಿಕ್ಕುವ ಮಲ್ಲಳ್ಳಿ ಫಾಲ್ಸ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಪುಷ್ಪಗಿರಿ ಅರಣ್ಯದಲ್ಲಿ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಭೋರ್ಗರೆತ ಹೆಚ್ಚಾಗಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.
ನೀರಿನ ಜೊತೆಗೆ ಕಣ್ಣಿಗೆ ಕಾಣಿಸುವಷ್ಟು ದೂರ ಹಸಿರ ಸಿರಿ ಜಲಪಾತದ ಅಂದವನ್ನು ಹೆಚ್ಚಿಸಿದೆ. ಸೋಮವಾರ ಪೇಟೆ ತಾಲ್ಲೂಕಿನನಲ್ಲಿರುವ ಮಲ್ಲಳ್ಳಿ ಫಾಲ್ಸ್ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಶಸ್ತವಾದ ಸ್ಥಳವಾಗಿದೆ. ಇಂತಹ ಆಹ್ಲಾದಕರ ವಾತಾವರಣದಲ್ಲಿ ಕಾಲ ಕಳೆದು ಬನ್ನಿ.