ನೊಯ್ಡಾದ ಸೆಕ್ಟರ್ 12 ರಲ್ಲಿ ವ್ಯಕ್ತಿಯೊಬ್ಬರು ಮೊಮೋಸ್ ತಿನ್ನುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಮಾರ್ಚ್ 19 ರ ಬುಧವಾರದಂದು ಎಂ ಬ್ಲಾಕ್ ಮಾರುಕಟ್ಟೆಯ ಬಳಿ ಈ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವೈರಲ್ ಆಗಿರುವ ಸಿಸಿ ಟಿವಿ ವಿಡಿಯೊದ ಪ್ರಕಾರ, ದೆಹಲಿಯ ಕೊಂಡ್ಲಿಯ ನಿವಾಸಿ ಲಲಿತ್ ತಮ್ಮ ಕುಟುಂಬದೊಂದಿಗೆ ಸಂಜೆ ತಿಂಡಿಗಾಗಿ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಅವರು ಅಂಗಡಿಯ ಹೊರಗೆ ನಿಂತಿದ್ದಾಗ, ಇಬ್ಬರು ಪುರುಷರು ಮೋಟಾರ್ಸೈಕಲ್ನಲ್ಲಿ ಬಂದಿದ್ದು, ಅವರಲ್ಲಿ ಒಬ್ಬ ಕೆಳಗಿಳಿದು ಕೆಲಕಾಲ ಸಂತ್ರಸ್ತನನ್ನು ಗಮನಿಸುವ ವೇಳೆ ಈ ವೇಳೆ ಇನ್ನೊಬ್ಬರು ಎಂಜಿನ್ ಅನ್ನು ಚಾಲನೆಯಲ್ಲಿರಿಸಿದ್ದರು. ಕೆಲವೇ ಕ್ಷಣಗಳಲ್ಲಿ, ಮೊದಲ ದುಷ್ಕರ್ಮಿ ಲಲಿತ್ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡು ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ.
ಸಂತ್ರಸ್ತ ಅವರನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಸಮೀಪದಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ದಾಖಲಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗುವ ಮೊದಲು ತಮ್ಮ ಯೋಜನೆಯನ್ನು ಲೆಕ್ಕಾಚಾರದ ರೀತಿಯಲ್ಲಿ ಕಾರ್ಯಗತಗೊಳಿಸುವುದನ್ನು ದೃಶ್ಯಾವಳಿಗಳು ಸ್ಪಷ್ಟವಾಗಿ ತೋರಿಸುತ್ತವೆ. ಲಲಿತ್ ಅವರ ದೂರಿನ ನಂತರ, ಸೆಕ್ಟರ್ 24 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಂತಹ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಭದ್ರತೆಯನ್ನು ಹೆಚ್ಚಿಸುವಂತೆ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಸಾರ್ವಜನಿಕರು ಜಾಗರೂಕರಾಗಿರಲು ಮತ್ತು ನಗರದಲ್ಲಿ ಅಪರಾಧವನ್ನು ತಡೆಯಲು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
उत्तर प्रदेश के सबसे तेजी से उभरते शहर नोएडा में एक शख्स दुकान पर मोमोज खा रहा था। आत्मनिर्भर 2 बदमाश वहां आए। तसल्ली पूर्वक खड़े होकर गतिविधियां देखी। मौका पाते ही उसके गले से सोने की चेन लूटकर भाग निकले। pic.twitter.com/ySNbgYn9At
— Sachin Gupta (@SachinGuptaUP) March 22, 2025