alex Certify BREAKING : ರಾಜ್ಯ ಸರ್ಕಾರದಿಂದ ಮಹತ್ವದ ‘ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ’ ಮಂಡನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ರಾಜ್ಯ ಸರ್ಕಾರದಿಂದ ಮಹತ್ವದ ‘ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ’ ಮಂಡನೆ

ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಮಹತ್ವದ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.

ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, 2025
(2025ರ ವಿಧಾನಸಭೆಯ ವಿಧೇಯಕ ಸಂಖ್ಯೆ-25)ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ.
ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956 (1957ರ ಕರ್ನಾಟಕ ಅಧಿನಿಯಮ 2) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ. (1) ಈ ಅಧಿನಿಯಮವನ್ನು ಕರ್ನಾಟಕ
ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2. ಪ್ರಕರಣ 3ರ ತಿದ್ದುಪಡಿ.- ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ
ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956 (1957ರ ಕರ್ನಾಟಕ ಅಧಿನಿಯಮ 2) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 3ನೇ ಪ್ರಕರಣದಲ್ಲಿ,
(i) ಉಪಪ್ರಕರಣ (1)ರಲ್ಲಿ, “ಎಪ್ಪತ್ತೈದು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಮತ್ತು “ನಾಲ್ಕು ಲಕ್ಷ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಐದು ಲಕ್ಷ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) ಉಪಪ್ರಕರಣ (2)ರಲ್ಲಿ, “ಎಪ್ಪತ್ತೈದು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಮತ್ತು “ನಾಲ್ಕು ಲಕ್ಷ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಐದು ಲಕ್ಷ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
3. ಪ್ರಕರಣ 4ರ ತಿದ್ದುಪಡಿ.- ಮೂಲ ಅಧಿನಿಯಮದ 4ನೇ ಪ್ರಕರಣದಲ್ಲಿ,-
(i
) ಉಪಪ್ರಕರಣ (1)ರಲ್ಲಿ, “ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎರಡು ಲಕ್ಷ ಐವತ್ತು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) (2)ನೇ ಉಪಪ್ರಕರಣದಲ್ಲಿ “ಇಪ್ಪತ್ತು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಇಪ್ಪತ್ತೈದು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
4. ಪ್ರಕರಣ 8ರ ತಿದ್ದುಪಡಿ.- ಮೂಲ ಅಧಿನಿಯಮದ 8ನೇ ಪ್ರಕರಣದ (2)ನೇ ಉಪಪ್ರಕರಣದ, (ಡಿ) ಖಂಡದ ಮೊದಲನೇ ಪರಂತುಕದಲ್ಲಿ ” ಮೂರು ಸಾವಿರದ ಐದುನೂರು
ರೂಪಾಯಿಗಳು ಮತ್ತು ಏಳು ಸಾವಿರ ರೂಪಾಯಿಗಳು” ಎಂಬ ಪದಗಳ ಬದಲಿಗೆ “ಐದು ಸಾವಿರ ರೂಪಾಯಿಗಳು ಮತ್ತು ಹತ್ತು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
5. ಪ್ರಕರಣ 10ರ ತಿದ್ದುಪಡಿ.- ಮೂಲ ಅಧಿನಿಯಮದ 10ನೇ ಪ್ರಕರಣದ (1)ನೇ
ಉಪಪ್ರಕರಣದಲ್ಲಿ, “ಅರವತ್ತು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎಂಬತ್ತು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
6. ಪ್ರಕರಣ 10ಇ ರ ತಿದ್ದುಪಡಿ.- ಮೂಲ ಅಧಿನಿಯಮದ 10ಇ ಪ್ರಕರಣದಲ್ಲಿ, “ಅರವತ್ತು
ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎಂಬತ್ತು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
7. ಪ್ರಕರಣ 10ಜೆ ರ ತಿದ್ದುಪಡಿ.- ಮೂಲ ಅಧಿನಿಯಮದ 10ಜೆ ಪ್ರಕರಣದಲ್ಲಿ, “ಐವತ್ತು
ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎಪ್ಪತ್ತು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
8. ಪ್ರಕರಣ 10ಕೆ ರ ತಿದ್ದುಪಡಿ.- ಮೂಲ ಅಧಿನಿಯಮದ 10ಜೆ ಪ್ರಕರಣದಲ್ಲಿ, “ಐವತ್ತು
ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎಪ್ಪತ್ತು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
9. ಪ್ರಕರಣ 11ರ ತಿದ್ದುಪಡಿ.- ಮೂಲ ಅಧಿನಿಯಮದ 11ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ, “ನಲವತ್ತು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎಂಬತ್ತು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
10. ಪ್ರಕರಣ 11ಎ ರ ತಿದ್ದುಪಡಿ.- ಮೂಲ ಅಧಿನಿಯಮದ 11ಎ ಪ್ರಕರಣದಲ್ಲಿ:-
(i) ಉಪಪ್ರಕರಣ (1)ರಲ್ಲಿ,-
(ಎ) “ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ, 2009” ಎಂಬ ಪದಗಳು, ಆವರಣಗಳು ಮತ್ತು ಅಂಕಿಗಳ ಬದಲಿಗೆ “ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ, 2025” ಎಂಬ ಪದಗಳು, ಆವರಣಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು;
(ಬಿ) “ಐವತ್ತು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಎಪ್ಪತ್ತೈದು ಸಾವಿರ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು(ಸಿ) 8ನೇ ಪರಂತುಕದಲ್ಲಿ, “ಐದು ಸಾವಿರ ರೂಪಾಯಿಗಳ” ಮತ್ತು “ಒಂದು ಲಕ್ಷ ರೂಪಾಯಿಗಳನ್ನು” ಎಂಬ ಪದಗಳ ಬದಲಿಗೆ “ಇಪ್ಪತ್ತು ಸಾವಿರ ರೂಪಾಯಿಗಳ” ಮತ್ತು “ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು” ಎಂಬ ಪದಗಳನ್ನು ಅನುಕ್ರಮವಾಗಿ ಪ್ರತಿಯೋಜಿಸತಕ್ಕದ್ದು.
(ii) (5)ನೇ ಉಪ ಪ್ರಕರಣದ, (ii)ನೇ ಖಂಡದಲ್ಲಿ, “ಒಂದು ಲಕ್ಷ ರೂಪಾಯಿಗಳಿಗೆ” ಎಂಬ ಪದಗಳ ಬದಲಿಗೆ “ಎರಡು ಲಕ್ಷ ರೂಪಾಯಿಗಳಿಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

11. ಪ್ರಕರಣ 11ಸಿ ರ ತಿದ್ದುಪಡಿ.- ಮೂಲ ಅಧಿನಿಯಮದ 11ಸಿ ಪ್ರಕರಣದಲ್ಲಿ:-
(i) ಉಪಪ್ರಕರಣ (1)ರಲ್ಲಿ, “ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳ” ಎಂಬ ಪದಗಳ
ಬದಲಿಗೆ “ಮೂರು ಲಕ್ಷ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(ii) ಉಪಪ್ರಕರಣ (2)ರಲ್ಲಿ, “ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳ” ಎಂಬ ಪದಗಳ ಬದಲಿಗೆ “ಮೂರು ಲಕ್ಷ ರೂಪಾಯಿಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
12. ಪ್ರಕರಣ 11ಡಿ ನ್ನು ಬಿಟ್ಟುಬಿಡುವುದು.- ಮೂಲ ಅಧಿನಿಯಮದ 11ಡಿ ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...