ಬೆಂಗಳೂರು : ಹನಿಟ್ರ್ಯಾಪ್ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನೇ ಬದಲಿಸಿದೆ. ಭ್ರಷ್ಟ ಪಕ್ಷದ ಹೊಸ ಚಿಹ್ನೆ ಎಂದು ಸಿಡಿ ಚಿತ್ರ ಇರುವ ಪೋಸ್ಟ್ ಹಂಚಿಕೊಂಡಿದೆ.
ನಿಮ್ಮ ಕೆಪಿಸಿಸಿ ಹನಿಟ್ರ್ಯಾಪ್ ಘಟಕ ಕ್ವೀನ್ಸ್ ರಸ್ತೆಯ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದೆಯೊ ಅಥವಾ ಸದಾಶಿವನಗರದ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದೆಯೋ..!! ಹನಿಟ್ರ್ಯಾಪ್ನಿಂದ ಹನಿಟ್ರ್ಯಾಪ್ಗಾಗಿ ಹನಿಟ್ರ್ಯಾಪ್ಗೋಸ್ಕರ ಇರುವ ಹಲಾಲ್ ಸರ್ಕಾರ!! ಎಂದು ಬಿಜೆಪಿ ಕಿಡಿಕಾರಿದೆ.
ಭ್ರಷ್ಟ ಪಕ್ಷದ ಹೊಸ ಚಿಹ್ನೆ.#CongressFailsKarnataka #CDSarakara #HoneyTrapSarkara pic.twitter.com/uiiaV4YkS0
— BJP Karnataka (@BJP4Karnataka) March 21, 2025