ಡಿಜಿಟಲ್ ಡೆಸ್ಕ್ : ಬ್ಯಾಂಕ್ ಆಫ್ ಇಂಡಿಯಾ (BOI) 400 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನಾಂಕವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮಾ.28 ರವರೆಗೆ ವಿಸ್ತರಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಯಾವುದೇ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ, 2021 ಏಪ್ರಿಲ್ 1 ರಿಂದ 2025 ಜನವರಿ 1 ರ ನಡುವೆ ಪದವಿಯನ್ನು ಪಡೆದಿರಬೇಕು. ಹಾಗೆಯೇ ಅರ್ಜಿದಾರರ ವಯಸ್ಸು ಜನವರಿ 1, 2025 ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳ ಒಳಗಿರಬೇಕು.
ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಒಳಗೊಂಡಿದೆ: ಮೊದಲಿಗೆ ಆನ್ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಸಾಮಾನ್ಯ/ಹಣಕಾಸು ಅರಿವು, ಇಂಗ್ಲಿಷ್ ಭಾಷೆ, ಪರಿಮಾಣಾತ್ಮಕ ಮತ್ತು ತಾರ್ಕಿಕ ಆಪ್ಟಿಟ್ಯೂಡ್ ಹಾಗೂ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ 100 ಪ್ರಶ್ನೆಗಳಿರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಶುಲ್ಕವು PwBD ಅಭ್ಯರ್ಥಿಗಳಿಗೆ ರೂ. 400 + GST, SC/ST/ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ರೂ. 600 + GST ಮತ್ತು ಇತರ ಅಭ್ಯರ್ಥಿಗಳಿಗೆ ರೂ. 800 + GST ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.