ಬೆಂಗಳೂರು : ಏ.4 ರಂದು ಕೆ-ಸೆಟ್ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ.
ಕೆಸೆಟ್-2023 ಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿರುವ ಹಾಗೂ (PG Degree – Pursuing) ಸ್ನಾತಕೊತ್ತರ ಪದವಿ ಪೂರ್ಣಗೊಳಿಸದೇ ಇರುವ ಅಭ್ಯರ್ಥಿಗಳು, ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಂಡಿದ್ದಲ್ಲಿ, ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಂಡಿರುವ ಬಗ್ಗೆ ಮೂಲ ಅಂಕಪಟ್ಟಿಯನ್ನು ಮತ್ತು ಈಗಾಗಲೇ ಪ್ರಾಧಿಕಾರದಿಂದ ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ನೀಡಿದ Verification Slip ಜೊತೆಗೆ ಇತರೆ ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಿ ದಿನಾಂಕ 04.04.2025 ರಂದು ಬೆಳಿಗ್ಗೆ 10.00 ಘಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು. ಇಲ್ಲಿ ತಮ್ಮ ಕೆಸೆಟ್ ಪ್ರಮಾಣ ಪತ್ರಗಳನ್ನು ಪಡೆಯಲು ಸೂಚಿಸಿದೆ.
ಶೈಕ್ಷಣಿಕ ಆರ್ಹತೆ ಮತ್ತು ಮೀಸಲಾತಿ ಸಂಬಂಧಿಸಿದ ಎಲ್ಲಾ ನಿಬಂಧನೆಗಳು ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲಾತಿ ಪ್ರಮಾಣ ಪತ್ರಗಳ ವಿವರಗಳಿಗೆ ದಿನಾಂಕ 11.09.2023 ರ ಅಧಿಸೂಚನೆಯನ್ನು ಓದಿಕೊಳ್ಳಲು ಸೂಚಿಸಿದೆ.
ವಿವಾಹಿತ ಮಹಿಳಾ ಅಭ್ಯರ್ಥಿಗಳು (ಕೆಸೆಟ್-2023ರ ಅರ್ಜಿಯಲ್ಲಿ ವಿವಾಹಿತರೆಂದು ನಮೂದಿಸಿ 2ಎ, 2ಬಿ, 3ಎ, 3ಬಿ ಮೀಸಲಾತಿ ಕೋರಿರುವ ಮಹಿಳಾ ಅಭ್ಯರ್ಥಿಗಳು) ತಮ್ಮ ಪತಿಯ ಹೆಸರಿನೊಂದಿಗೆ ಜಾರಿಯಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಮೂಲ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಸಲ್ಲಿಸಲು ಸೂಚಿಸಿದೆ.
ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಂಡು ಕೆಸೆಟ್ ಪ್ರಮಾಣ ಪತ್ರವನ್ನು ಇದುವರೆಗೂ ಪಡೆಯದಿರುವ (ಸ್ನಾತಕೋತ್ತರ ಪದವಿ ಪೂರ್ಣಗೊಂಡಿರುವ) ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದು ಖುದ್ದು ಹಾಜರಾಗಿ ದಾಖಲೆ ಪರಿಶೀಲನೆ ಸಮಯದಲ್ಲಿ ನೀಡಲಾದ ವೆರಿಫಿಕೇಷನ್ ಸ್ಲಿಪ್ ಅನ್ನು ಪ್ರಾಧಿಕಾರಕ್ಕೆ ಸಲ್ಲಿಸಿ, ಕೆಸೆಟ್ ಪ್ರಮಾಣ ಪತ್ರವನ್ನು ಪಡೆಯಲು ಸೂಚಿಸಿದೆ.
