ಬೆಂಗಳೂರು : ಟೆಕ್ಕಿ ಅತುಲ್ ಕೇಸ್ ಮಾದರಿಯಲ್ಲೇ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಹಣಕ್ಕಾಗಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ನನಗೆ ಮಾನಸಿಕ , ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಟೆಕ್ಕಿ ಶ್ರೀಕಾಂತ್ ಆರೋಪ ಮಾಡಿದ್ದು, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲು ಮಾಡಿದ್ದಾರೆ.
2022 ರ ಆಗಸ್ಟ್ ನಲ್ಲಿ ನಾನು ಬಿಂದುಶ್ರೀಯನ್ನು ಮದುವೆ ಆಗಿದ್ದೇನೆ, 2 ವರ್ಷಗಳಾದರೂ ಸಹ 1 ದಿನ ಸರಿಯಾಗಿ ಸಂಸಾರ ಮಾಡಿಲ್ಲ. ಬಲವಂತವಾಗಿ ಮುಟ್ಟಿದ್ರೆ ಸಾಯುತ್ತೇನೆ ಅಂತ ಬ್ಲಾಕ್ ಮೇಲೆ ಮಾಡುತ್ತಾಳೆ. 60 ವರ್ಷ ಆದಮೇಲೆ ಮಕ್ಕಳು ಮಾಡಿಕೊಳ್ಳೋಣ ಅಂತ ಹೇಳುತ್ತಾಳೆ. ಅಲ್ಲದೇ ಲಕ್ಷಾಂತರ ಹಣಕ್ಕಾಗಿ ಪೀಡಿಸುತ್ತಾಳೆ. ಹಣ ಕೊಡದಿದ್ದಕ್ಕೆ ಪತ್ನಿ ಕುಟುಂಬದವರು ಕೂಡ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ. ಅಸಲಿಗೆ ಏನಿದು ಕಥೆ..? ಪತಿ ಆರೋಪ ನಿಜವೇ..? ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.