alex Certify BIG NEWS : ರಾಜ್ಯ ಸರ್ಕಾರದಿಂದ ಮಹತ್ವದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡನೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರದಿಂದ ಮಹತ್ವದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡನೆ.!

ಬೆಂಗಳೂರು : ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2025 (2025ರ ವಿಧಾನಸಭೆಯ ವಿಧೇಯಕ ಸಂಖ್ಯೆ-18)ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ನ್ನು (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ,-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಗ್ರಾಮ ಸ್ವರಾಜ್
ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2. 199ಬಿ ಮತ್ತು 199ಸಿ ಹೊಸ ಪ್ರಕರಣಗಳ ಸೇರ್ಪಡೆ.- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14)ರ 199ಎ ಪ್ರಕರಣದ ತರುವಾಐ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“199ಬಿ. ಸ್ವತ್ತುಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿ-ಯನ್ನು ನೀಡುವುದು. (1) ಈ
ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಕಟ್ಟಡ ನಿರ್ಮಾಣದ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿ-ಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಿಗಳು, ಅಧಿಕಾರವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನಿಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು.
(2) ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳ ಮೇರೆಗೆ ಅಧಿಸೂಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಬರುವ ಸಂದರ್ಭದಲ್ಲಿ, ಅನುಮೋದಿತ ಲೇಔಟ್ ಪ್ಲಾನನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 17ನೇ ಪ್ರಕರಣದಡಿ ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದಿಂದ ಪಡೆಯತಕ್ಕದ್ದು ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ
ಅಧಿನಿಯಮ 11)ರ 17ನೇ ಪ್ರಕರಣ ಮತ್ತು 17ನೇ ಪ್ರಕರಣದ 2(ಇ) ಉಪ-ಪ್ರಕರಣದ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ.
(3) ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ11)ರ ಉಪಬಂಧಗಳ ಮೇರೆಗೆ ರಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಒಳಗೊಳ್ಳದಿರುವ ಸಂದರ್ಭದಲ್ಲಿ ಅನುಮೋದಿತ ಲೇಔಟ್ ಪ್ಲಾನನ್ನು ಪಟ್ಟಣ ಮತ್ತು ನಗರ ಯೋಜನೆ ನಿರ್ದೇಶಕ ಅಥವಾ ನಿರ್ದೇಶಕನು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 4 ಕೆ ಪ್ರಕರಣದ (2) ಉಪ-ಪ್ರಕರಣದಡಿ ಅಧಿಕೃತಗೊಳಿಸಿದ ಸಹಾಯಕ ನಿರ್ದೇಶಕ, ಪಟ್ಟಣ ಮತ್ತು ನಗರ ಯೋಜನೆ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯಿಂದ ಪಡೆದುಕೊಳ್ಳತಕ್ಕದ್ದು, ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ:

ಪರಂತು ಗ್ರಾಮ ಪಂಚಾಯಿತಿಯ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಯು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ11)ರ ಸದರಿ ಉಪಬಂಧಗಳನ್ನು ಪಾಲಿಸಲು ವಿಫಲನಾದರೆ ಮತ್ತು ಕಾನೂನುಬದ್ದವಾಗಿಲ್ಲದೆ ರಚಿತವಾದ ನಿವೇಶನಕ್ಕೆ ಹೊಸ ಪಿಐಡಿ ಅಥವಾ ಖಾತಾವನ್ನು ನೀಡಿದರೆ, ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಅಥವಾ ಪ್ರಾಧಿಕಾರಿಯು ನಿಯಮಿಸಬಹುದಾದಂಥ ದಂಡನೆ ಅಥವಾ ಶಿಕ್ಷೆಗೆ ಹೊಣೆಗಾರನಾಗಿರತಕ್ಕದ್ದು.

199ಸಿ. ಕಟ್ಟಡ ಮತ್ತು ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳು. (1) ಗ್ರಾಮ ಪಂಚಾಯಿತಿಯು ಮಾದರಿ ಕಟ್ಟಡ ಉಪವಿಧಿಗಳ ಉಪಬಂಧಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಅಥವಾ ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯ ಮೇಲಿನ ಅನುಮೋದಿತವಲ್ಲದ ಲೇಔಟ್ ಅಥವಾ ಅದಿಭೋಗ ಅಥವಾ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಪಡೆಯದೆ ಸ್ವಾಧೀನ ಪಡಿಸಿಕೊಂಡ ಕಟ್ಟಡವನ್ನು ಒಳಗೊಂಡು ಪ್ರತಿಯೊಂದು ಕಟ್ಟಡ, ಖಾಲಿ ಭೂಮಿ ಅಥವಾ ಅವೆರಡರಿಂದಲೂ, ಈ ಉಪಬಂಧವನ್ನು ಸೇರಿಸಲಾದ ದಿನಾಂಕಕ್ಕೆ ಮೊದಲು ಸೃಜಿಸಲಾದ ಸ್ವತ್ತುಗಳಿಗೆ ಮಾತ್ರ ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ನಿಕಾಯ, ಯಾವುದೇ ಶಾಸನಬದ್ಧ ನಿಕಾಯ ಅಥವಾ ಸಂಸ್ಥೆಗೆ ಸೇರಿದ ಭೂಮಿಯನ್ನು ಹೊರತುಪಡಿಸಿ ಸ್ವತ್ತು ತೆರಿಗೆಯನ್ನು ವಿಧಿಸಬಹುದು ಮತ್ತು ಸಂಗ್ರಹಿಸಬಹುದು.ಅಂಥ ಕಟ್ಟಡ ಅಥವಾ ನಿವೇಶನಕ್ಕಾಗಿ ವಿಧಿಸಿದ ಸ್ವತ್ತು ತೆರಿಗೆಯು ಮೊದಲ ವರ್ಷಕ್ಕಾಗಿ ಪಾವತಿಸಬೇಕಾದ ತೆರಿಗೆಯು ಎರಡು ಪಟ್ಟಾಗಿರತಕ್ಕದ್ದು:

ಮತ್ತು ತರುವಾಯ ವರ್ಷಗಳಿಗಾಗಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸತಕ್ಕದ್ದು, ಅದನ್ನು ಪ್ರತ್ಯೇಕ ರಿಜಿಸ್ಟರಿನಲ್ಲಿ ನಿರ್ವಹಿಸತಕ್ಕದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ)
ಅಧಿನಿಯಮ, 2025ರ ಪ್ರಾರಂಭದ ದಿನಾಂಕದ ತರುವಾಯ ರಿಜಿಸ್ಟರ್ ನಲ್ಲಿ ಯಾವುದೇ ಹೊಸ ಸ್ವತ್ತನ್ನು
ನಮೂದಿಸತಕ್ಕದ್ದಲ್ಲ;

ಪರಂತು ಅಂಥ ಕಟ್ಟಡ ಅಥವಾ ಖಾಲಿ ಭೂಮಿಯಿಂದ ಈ ಉಪ-ಪ್ರಕರಣದಡಿ ವಿಧಿಸಲಾದ ಮತ್ತು ಸಂಗ್ರಹಿಸಲಾದ ಸ್ವತ್ತು ತೆರಿಗೆಯ, ಅಂಥ ಕಟ್ಟಡ ಅಥವಾ ಖಾಲಿ ಭೂಮಿಗೆ ಮಾಡಿದ ಉಲ್ಲಂಘನೆಯನ್ನು ಸಕ್ರಮಗೊಳಿಸುವ ಯಾವುದೇ ಹಕ್ಕು, ಅಥವಾ ಹಕ್ಕುಸ್ವಾಮ್ಯ ಮಾಲೀಕತ್ವ ಅಥವಾ ಕಾನೂನುಬದ್ಧ ಸ್ನಾನಮಾನವನ್ನು ಪ್ರದತ್ತಗೊಳಿಸುವುದಿಲ್ಲ ಅಂಥ ಕಟ್ಟಡ ಅಥವಾ ಖಾಲಿ ಭೂಮಿಯನ್ನು ಹೊಂದಿರುವ ವ್ಯಕ್ತಿಗಳನ್ನು ಕಾನೂನು ಉಲ್ಲಂಘನೆಗಾಗಿ ಈ ಅಧಿನಿಯಮ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಕಾನೂನುಬದ್ಧ ಕ್ರಮಕ್ಕೆ ಯಾವಾಗಲೂ ಹೊಣೆಗಾರರಾಗಿರತಕ್ಕದ್ದು.
(2) ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು (1)ನೇ ಉಪ-ಪ್ರಕರಣದಲ್ಲಿ ನಿರ್ಧಿಷ್ಟಪಡಿಸಿದಂತೆ ದಾಖಲೆಗಳನ್ನು ನಿರ್ವಹಿಸತಕ್ಕದ್ದು, ಅದು ಈ ಪ್ರಕರಣದಡಿ ತೆರಿಗೆಗೊಳಗಾದ ಕಾನೂನುಬದ್ಧ ಕಟ್ಟಡಗಳ, ಅಥವಾ ಖಾಲಿ ಭೂಮಿಗಳ ಹಾಗೂ ಕಾನೂನುಬದ್ಧವಲ್ಲದ ಕಟ್ಟಡಗಳ, ಅಥವಾ ಖಾಲಿ ಭೂಮಿಗಳ ವಿವರಗಳನ್ನು ಒಳಗೊಂಡಿರತಕ್ಕದ್ದು.

3. ತೊಂದರೆಗಳನ್ನು ನಿವಾರಿಸುವ ಅಧಿಕಾರ.- ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ರಾಜಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ತೊಂದರೆಗಳನ್ನು ನಿವಾರಿಸಲು ತನಗೆ ಅವಶ್ಯಕ ಅಥವಾ ಯುಕ್ತವೆಂದು ಕಂಡುಬರುವ ಮತ್ತು ಈ ಅಧಿನಿಯಮದ ಉದ್ದೇಶಗಳಿಗೆ ಅಸಂಗತವಾಗಿದಂಥ ಉಪಬಂಧಗಳನ್ನು ರಚಿಸಬಹುದು:
ಪರಂತು, ಅಂಥ ಯಾವ ಆದೇಶವನ್ನು, ಈ ಅಧಿನಿಯಮವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯಗೊಂಡ ತರುವಾಯ ಮಾಡತಕ್ಕದ್ದಲ್ಲ.
(2) ಉಪಪ್ರಕರಣ(1)ರಡಿ ಮಾಡಲಾದ ಪ್ರತಿಯೊಂದು ಆದೇಶವನ್ನು ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಸಾಧ್ಯವಾದಷ್ಟು ಬೇಗನೇ ಮಂಡಿಸತಕ್ಕದ್ದು.

\\

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...